ಹುಬ್ಬಳ್ಳಿ: ಕೋರ್ಟ್ ಆದೇಶ ಉಲ್ಲಂಘಿಸಿ ರಾಜ್ಯದಲ್ಲಿ ಹಿಜಾಬ್ ಬೆಂಕಿ ಕಾಡ್ಗಿಚ್ಚಿನಂತೆ ಹೆಚ್ಚುತ್ತಿದೆ. ವಸ್ತ್ರ ವಿವಾದ - ವಿದ್ಯಾರ್ಥಿಗಳ ಮಧ್ಯೆ ದ್ವೇಷದ ವಿಷದ ಬೀಜ ಬಿತ್ತುತ್ತಿದೆ.
ಇದರ ಮಧ್ಯೆ ಕೆಲವರು ದುರದ್ದೇಶದಿಂದ ಗಲಾಟೆ ಮಾಡುತ್ತಿದ್ದಾರೆ. ಮಧ್ಯಂತರ ಆದೇಶ ಎಲ್ಲಿ ಪಾಲನೆ ಆಗುತ್ತಿಲ್ಲವೋ ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಹಿಜಾಬ್ ಹಾಕಿಸೋಕೆ, ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ಹಿಜಾಬ್ ಗೆ ಸಂಬಂಧಿಸಿದಂತೆ ಯಾವ ನಿರ್ಣಯವನ್ನು ಕೊಡುತ್ತದೆಯೋ ಅದನ್ನ ನಾವು ಪಾಲನೆ ಮಾಡಬೇಕಾಗುತ್ತೆ.
ಇನ್ನು ತೀರ್ಪು ಹಿಜಾಬ್ ಪರವಾಗಿ ಬಂದ್ರು, ವಿರುದ್ಧವಾಗಿ ಬಂದ್ರು ಹಿಜಾಬ್ ಹಾಕ್ತಿವಿ ಅನ್ನೋದು ಸರಿಯಲ್ಲ. ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿ.
ಸರ್ಕಾರವಾದ್ರು ಎಷ್ಟು ದಿನ ಇವರನ್ನ ಸಂಬಾಳಿಸಬೇಕು, ಗಲಾಟೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/02/2022 01:33 pm