ಹುಬ್ಬಳ್ಳಿ: ಕಾನೂನು ವಿಶ್ವ ವಿದ್ಯಾಲಯ ಕುಲಪತಿ ಈಶ್ವರ್ ಭಟ್ ವಿರುದ್ಧ ಕಳೆದ 3 ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಆಫ್ ಲೈನ್ ಪರೀಕ್ಷೆ ಖಂಡಿಸಿ, ನವನಗರದ ಕಾನೂನು ವಿಶ್ವ ವಿದ್ಯಾಲಯ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿಗಳ ಮನವಿಗೂ ಡೋಂಟ್ ಕೇರ್ ಎಂದ ಕಾನೂನು ವಿವಿ ವಿಸಿ, ಪ್ರತಿಭಟನೆಯಲ್ಲಿ ಬೆಂಗಳೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ನಾಳೆ ಬೆಂಗಳೂರು ಸೇರಿದಂತೆ ಹುಬ್ಬಳ್ಳಿಯಲ್ಲೂ ಪ್ರತಿಭಟನೆ ಮಾಡುವುದಾಗಿ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.
Kshetra Samachara
08/12/2021 11:34 am