ಧಾರವಾಡ: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲೂ ಆರ್‌ಎಸ್ಎಸ್ ನಾಯಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕವಿವಿಯ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಜಯಶ್ರೀ ಎನ್ನುವವರು ನಿಯಮಾವಳಿ ಪ್ರಕಾರವೇ ನೇಮಕಗೊಂಡಿದ್ದರು. ಆದರೆ, ಆರ್‌ಎಸ್‌ಎಸ್‌ನ ಜಯಂತ ಎನ್ನುವವರು ಜಯಶ್ರೀ ಅವರನ್ನು ನಿಯಮಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿದ್ದರು. ಬೇರೆ ಬೇರೆ ಕಡೆಗಳಲ್ಲಿ ಕುಲಪತಿಗಳನ್ನೇ ನಿಯಮಬಾಹಿರವಾಗಿ ಇವರದ್ದೇ ಸರ್ಕಾರ ನೇಮಕ ಮಾಡಿದೆ. ಅದರ ಬಗ್ಗೆ ಇವರು ಏಕೆ ಮಾತನಾಡುವುದಿಲ್ಲ? ಆರ್‌ಎಸ್‌ಎಸ್ ಎನ್ನುವುದು ಎಲ್ಲ ರಂಗದಲ್ಲೂ ಹಸ್ತಕ್ಷೇಪ ಮಾಡುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್‌ನ ಕೀಲು ಗೊಂಬೆ. ಎಲ್ಲ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆ ಸತ್ಯವಾಗಿದೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಬರೀ ಹಿಂದೂ, ಹಿಂದುತ್ವ ಎನ್ನುವುದೇ ಆರ್‌ಎಸ್‌ಎಸ್‌ನ ಮುಖ್ಯ ಅಜೆಂಡಾ ಆಗಿದೆ. ಹಾಗಾದರೆ ನಾವು ಯಾರು? ನಾವೂ ಕೂಡ ಹಿಂದೂಗಳೇ ಆಗಿದ್ದೇವೆ. ಅನ್ಯ ಕೋಮಿನವರ ಬಗ್ಗೆ ವಿಷ ಬೀಜ ಬಿತ್ತುವುದೇ ಆರ್‌ಎಸ್‌ಎಸ್ ಕೆಲಸವಾಗಿದೆ. ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ಜನತೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.
Kshetra Samachara
07/10/2021 01:31 pm