ಹುಬ್ಬಳ್ಳಿ: ರಾಜ್ಯಾದ್ಯಂತ ಹಿಜಾಬ್ ಹಾಗೂ ಕೇಸರಿ ಶಾಲುಗಳ ಗದ್ದಲ ಸಾಕಷ್ಟು ತಿರುವನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಇಲ್ಲೊಬ್ಬ ವಿದ್ಯಾರ್ಥಿನಿ ಹಾಕಿಕೊಂಡು ಬಂದಿರುವ ಮಾಸ್ಕ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಿಜಾಬ್ ಗದ್ದಲದ ನಡುವೆಯೂ ಇಲ್ಲೊಬ್ಬ ಮುಸ್ಲಿಂ ವಿದ್ಯಾರ್ಥಿನಿ "ಅಪ್ನಾ ಟೈಮ್ ಆಯೇಗಾ" ಎಂದು ಮಾಸ್ಕ್ ಮೇಲೆ ಬರೆದಿರುವ ಮಾಸ್ಕ್ ಹಾಕಿಕೊಂಡು ಬಂದಿದ್ದಾಳೆ. ಹುಬ್ಬಳ್ಳಿಯ ಉರ್ದು ಶಾಲೆಯಲ್ಲಿ ಘಟನೆ ನಡೆದಿದ್ದು, ಹಿಜಾಬ್ ಸಮವಸ್ತ್ರದೊಂದಿಗೆ ಮಾಸ್ಕ್ ಮೇಲೆ 'ಅಪ್ನಾ ಟೈಮ್ ಆಯೇಗಾ' ಎಂಬ ಶಬ್ದ ಇರುವ ಮಾಸ್ಕ್ ಹಾಕಿಕೊಂಡಿರುವುದು ಹಿಜಾಬ್ ಗದ್ದಲದ ನಡುವೆ ಮತ್ತೊಂದು ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/02/2022 02:32 pm