ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರತಿನಿಧಿ ಆಯ್ಕೆಯ ಚುನಾವಣೆ ಆಗಲೇ ಘೋಷಣೆಯಾಗಿದೆ. ಇಲ್ಲಿ ಶಿಕ್ಷಕರೇ ಮತದಾರರು, ಆದರೆ ಮತದಾರರಾಗುವ ಆಸಕ್ತಿ ಶಿಕ್ಷಕರಿಗೆ ಇಲ್ಲ. ಇದು ಅಭ್ಯರ್ಥಿಗಳನ್ನು ಕಂಗಾಲು ಮಾಡಿದ್ದು, ಮತದಾನದ ನೋಂದಣಿ ಮಾಡಿಸಲು ಅರ್ಹ ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.
ಹೌದು..ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡಿ ಕಳುಹಿಸುವುದಕ್ಕಾಗಿ ಈ ಚುನಾವಣೆ ನಡೆಯಲಿದೆ. ಕಳೆದ ಏಳು ಬಾರಿ ಈ ಕ್ಷೇತ್ರದಿಂದ ಬಸವರಾಜ ಹೊರಟ್ಟಿ ಅವರೇ ಆಯ್ಕೆಯಾಗಿದ್ದುಂಟು. ಪ್ರತಿ ಚುನಾವಣೆಯಲ್ಲಿ ಹೊಸದಾಗಿಯೇ ನೋಂದಣಿ ಮಾಡಿಸಿ ಮತದಾರರಾಗಬೇಕು. ಇದು ಈ ಚುನಾವಣೆಯ ವಿಶೇಷ. ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಸೇರಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಪ್ರೌಢ, ಪಿಯು, ಪದವಿ, ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಹಂತದ ಶಿಕ್ಷಕರು, ಉಪನ್ಯಾಸಕರು ಮತದಾರರಾಗಿದ್ದಾರೆ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕರು ಮಾತ್ರ, ಇದರ ಮತದಾರರಲ್ಲ. ಇದು ಸರಿಯಲ್ಲ. ಇದಕ್ಕೆ ಸಂಬಂಧಪಟ್ಟಂತೆ ಕಾನೂನು ತಿದ್ದುಪಡಿ ತಂದು ನಮ್ಮನ್ನೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಪ್ರಾಥಮಿಕ ಶಾಲಾ ಶಿಕ್ಷಕರದು. ಈ ವಿಷಯವಾಗಿ ಹಲವಾರು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಆದರೆ ಅರ್ಹ ಶಿಕ್ಷಕರು ಇದರಿಂದ ಹಿಂದುಳಿದಿರುವುದು ಚಿಂತಾಜನಕ ಸಂಗತಿಯಾಗಿದೆ.
ಇನ್ನೂ ಈ ನಾಲ್ಕು ಜಿಲ್ಲೆಗಳ ಶಿಕ್ಷಕರು, ಉಪನ್ಯಾಸಕರು ಇದರ ಮತದಾರರು. ನಾಲ್ಕು ಜಿಲ್ಲೆಗಳಲ್ಲಿ ಸೇರಿಸಿದರೆ ಕನಿಷ್ಠವೆಂದರೂ 50 ಸಾವಿರಕ್ಕೂ ಅಧಿಕ ಮತದಾರರಾಗುವ ಶಿಕ್ಷಕರಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ. ಆದರೆ ಹೆಚ್ಚಿನ ಶಿಕ್ಷಕರಲ್ಲಿ ಮತದಾರರಾಗುವ ಆಸಕ್ತಿಯೇ ಇಲ್ಲ, ಶಿಕ್ಷಕರಾರು ತಾವಾಗಿ ಮುಂದೆ ಬಂದು ಮತದಾರರಾಗುವ ಗೋಜಿಗೆ ಹೋಗುತ್ತಿಲ್ಲ. ಅಭ್ಯರ್ಥಿಗಳಾಗ ಬಯಸುವವರೇ ತಾವೇ ಅರ್ಜಿ ತುಂಬಿ, ಅದಕ್ಕೆ ಬೇಕಾದ ದಾಖಲೆಗಳನ್ನು ಪಡೆದು ಶಿಕ್ಷಕರ ಕ್ಷೇತ್ರದಲ್ಲಿ ಮತದಾರರನ್ನು ನಾವೇ ನೋಂದಣಿ ಮಾಡಿಸಬೇಕು. ಆ ಕೆಲಸವನ್ನು ನಾವು ಕಳೆದ ಕೆಲ ತಿಂಗಳಿಂದ ಮಾಡಿಸುತ್ತಿದ್ದೇವೆ. ಇದೀಗ 17 ಸಾವಿರಕ್ಕೂ ಅಧಿಕ ಮತದಾರರ ನೋಂದಣಿ ಆಗಿದೆ.
ಒಟ್ಟಿನಲ್ಲಿ ಈ ವರೆಗೂ 17,419 ಜನ ಮಾತ್ರ ಶಿಕ್ಷಕರು ನೋಂದಣಿ ಮಾಡಿಸಿ ಮತದಾರರಾಗಿದ್ದಾರೆ. ಇದರಲ್ಲಿ ಹೆಚ್ಚು ಧಾರವಾಡದಲ್ಲಿ 5884, ಹಾವೇರಿ 4671, ಗದಗ 3259 ಹಾಗೂ ಉತ್ತರ ಕನ್ನಡ ಜಿಲ್ಲೆಯ 3605 ಮತದಾರರಿದ್ದಾರೆ. ಇವರೆಲ್ಲರನ್ನು ಅಭ್ಯರ್ಥಿಗಳ ಪರವಾಗಿ ಬೆಂಬಲಿಗರೇ ನೋಂದಣಿ ಮಾಡಿಸಿದ್ದಾರೆ.'
Kshetra Samachara
31/05/2022 03:47 pm