ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಧರಣಿಗೆ ಮುಂದಾದ ವೀರಶೈವ ಮಹಾಸಭಾ

ಧಾರವಾಡ: ವೀರಶೈವ-ಲಿಂಗಾಯತ ಸಮಾಜ ಹಿಂದುಳಿದ ವರ್ಗದ (ಓಬಿಸಿ) ಪಟ್ಟಿಗೆ ಸೇರಿಸಲು ಹಾಗೂ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಸೆ.24 ರಂದು ಬೆಳಗ್ಗೆ 10.30ಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕವಾಗಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ ಹೊರಡಿಸಿದ ಇತರ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಸೇರಿಸಿ ಆ ಮೂಲಕ ಹಿಂದುಳಿದಿರುವ ಸಮುದಾಯದ ಯುವ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಅವಕಾಶ ಕಲ್ಪಿಸಬೇಕಿದೆ ಎಂದರು.

ಭಾರತ ಸರ್ಕಾರವು ಸಂವಿಧಾನದ ಅನುಚ್ಛೇದ 15(4) ಮತ್ತು 16 (4)ರನ್ವಯ ಇತರ ಹಿಂದುಳಿದ ವರ್ಗಗಳ ಪಟ್ಟಿಯನ್ನು ಅಧಿಸೂಚಿಸಿದೆ. ಇದು ಪಟ್ಟಿಯಲ್ಲಿರುವ ಸಮುದಾಯದವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ನಾಗರಿಕ ಹುದ್ದೆಗಳಲ್ಲಿ ಮೀಸಲು ಕಲ್ಪಿಸುತ್ತದೆ.

ವಾಸ್ತವವಾಗಿ ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಇತರ ಹಿಂದುಳಿದವರ ಪಟ್ಟಿಯಲ್ಲಿರುವ ಎಲ್ಲ ಸಮುದಾಯಗಳನ್ನೂ ಸೇರ್ಪಡೆ ಮಾಡಬೇಕಾಗುತ್ತದೆ. ಆದರೆ, ಕೇಂದ್ರದ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕೈಬಿಟ್ಟಿರುವುದರಿಂದ ಬಡ ಜನರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಿಂದ ವಂಚಿತವಾಗುವಂತಾಗಿದೆ ಎಂದರು.

ಸಮುದಾಯದ ಹಿತದೃಷ್ಟಿಯಿಂದ ನಿಗಮ ಸ್ಥಾಪಿಸಿ, 1 ಸಾವಿರ ಕೋಟಿ ರೂಪಾಯಿ ಒದಗಿಸಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿಗಳ ಮೇಲೆ ಸಮುದಾಯದ ಶಾಸಕರು ಒತ್ತಡ ತರಬೇಕೆಂದು ಆಗ್ರಹಿಸಿದ ಹುಣಸಿಮರದ, ಧರಣಿಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

Edited By :
Kshetra Samachara

Kshetra Samachara

22/09/2020 07:23 pm

Cinque Terre

15.91 K

Cinque Terre

0

ಸಂಬಂಧಿತ ಸುದ್ದಿ