ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಧಾರವಾಡಕ್ಕೆ ಬಂದಿದ್ದೇ ತಡ ಕಾಂಗ್ರೆಸ್ ಕಾರ್ಯಕರ್ತರು ಮಾಸ್ಕ್ ಗಳಿಲ್ಲದೇ ಡಿಕೆಶಿ ಅವರನ್ನು ಭೇಟಿ ಮಾಡಲು ಮುಗಿಬಿದ್ದಿದ್ದರು.
ಬೆಳಗಾವಿಯಿಂದ ಧಾರವಾಡಕ್ಕೆ ಬಂದ ಡಿಕೆಶಿ ಅವರನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬಳಿ ನಿಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅಲ್ಲಿ ಅವರಿಗೆ ಸನ್ಮಾನ ಮಾಡಿದರು. ಬಹುತೇಕರು ಮಾಸ್ಕ್ ಇಲ್ಲದೇ ಮುಗಿಬಿದ್ದಿದ್ದರು.
ಅಲ್ಲಿಂದ ವೈದ್ಯಕೀಯ ನೌಕರರ ಬಳಿ ಬಂದ ಡಿಕೆಶಿ, ಅವರ ಮನವಿ ಸ್ವೀಕರಿಸಿದರು. ಇಲ್ಲೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಮುಗಿಬಿದ್ದಿದ್ದರು.
ಅಲ್ಲಿಂದ ನೇರವಾಗಿ ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋದ ಡಿಕೆಶಿ ಅವರನ್ನು ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು. ಪಟಾಕಿ ಸಿಡಿಸಿ, ಜಯಘೋಷಗಳೊಂದಿಗೆ ಸಾಮಾಜಿಕ ಅಂತವನ್ನು ಗಾಳಿಗೆ ತೂರಿ ಅದ್ಧೂರಿಯಾಗಿಯೇ ಸ್ವಾಗತಿಸಿದರು. ಡಿಕೆಶಿ ಆಗಮನದ ಹಿನ್ನೆಲೆ ಬೆಳಗಾವಿ ರಸ್ತೆ, ಹಳೇ ಬಸ್ ನಿಲ್ದಾಣದ ರಸ್ತೆ ಕೆಲ ಕಾಲ ವಾಹನ ದಟ್ಟನೆಯಿಂದ ಕೂಡಿತ್ತು.
Kshetra Samachara
03/10/2020 02:30 pm