ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬ್ರೇಕಿಂಗ್: ಡಿಜೆ ಹಚ್ಚಲು ಅವಕಾಶ ನೀಡುವಂತೆ ಯುವಕರಿಂದ ಪಾದಯಾತ್ರೆ

ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ವೇಳೆ ಡಿಜೆ ಹಚ್ಚಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ನೂರಾರು ಯುವಕರು ಪಾದಯಾತ್ರೆ ನಡೆಸಿದ್ದಾರೆ. ಹುಬ್ಬಳ್ಳಿಯ ರಾಮನಗರದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದವರೆಗೆ ಪಾದಯಾತ್ರೆ ಮಾಡಿದ ಯುವಕರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವರ್ಷದಲ್ಲಿ ಗಣೇಶೋತ್ಸವ ಸಂಭ್ರಮಕ್ಕೆ ಒಂದು ಬಾರಿ ಮಾತ್ರ ಡಿಜೆ ಹಚ್ಚಲಾಗುತ್ತೆ. ಅದು ಹಬ್ಬದ ಸಂಭ್ರಮದ ಒಂದು ಭಾಗವಷ್ಟೇ. ಈಗ ಸರಕಾರ ಅದಕ್ಕೆ ಅನುಮತಿ ನೀಡದಿರುವುದು ಸರಿಯಲ್ಲ ಎಂಬುದು ಪ್ರತಿಭಟನಾನಿರತ ಯುವಕರ ವಾದವಾಗಿದೆ. ಸುಮಾರು 2 ಕಿಲೋಮೀಟರ್ ಪಾದಯಾತ್ರೆ ನಡೆಸಿದ ಯುವಕರು ಡಿಜೆ ಬಳಸಲು ಅನುಮತಿ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/08/2022 05:58 pm

Cinque Terre

32.23 K

Cinque Terre

20

ಸಂಬಂಧಿತ ಸುದ್ದಿ