ನವಲಗುಂದ : ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮ ಪಂಚಾಯತ್ ನ ಅಧ್ಯಕ್ಷ ಗಿರೀಶ ಮಾಸ್ತಿ ಕೆಲವು ದಿನಗಳ ಹಿಂದೆ ಕಾರಣಾಂತರಗಳಿಂದ ರಾಜೀನಾಮೆ ನೀಡಿದ್ದು, ತೆರವಾದ ಅಧ್ಯಕ್ಷ ಸ್ಥಾನಕ್ಕೆ ಈಗ ತಲೆ ಮೊರಬ ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗರಾಜ ಗುರುಪಾದಪ್ಪ ಮನಗೂಳಿ 16 ಮತಗಳನ್ನು ಪಡೆದು ಗದ್ದುಗೆ ಏರಿದ್ದಾರೆ.
ಮೊರಬ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತಲೆ ಮೊರಬ ಒಳಪಟ್ಟಿದ್ದು, ಮೊರಬ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ 29 ಇತ್ತು. ಅಧ್ಯಕ್ಷ ಸ್ಥಾನಕ್ಕೆ ತಲೆ ಮೊರಬ ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗರಾಜ ಗುರುಪಾದಪ್ಪ ಮನಗೂಳಿ ಹಾಗೂ ಮೊರಬ ಗ್ರಾಮದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ ಗದಿಗೆಪ್ಪ ಹೂಲಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಅಶೋಕ ಹೂಲಿ 13 ಮತಗಳನ್ನು ಪಡೆದರೆ ನಾಗರಾಜ ಮನಗೂಳಿ 16 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡರಿಂದ ಹಾಗೂ ಮೊರಬ-ತಲೆ ಮೊರಬ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಹಲವರಿಂದ ಅಭಿನಂದಿಸಿ, ಸನ್ಮಾನವನ್ನು ಮಾಡಲಾಯಿತು.
Kshetra Samachara
22/05/2022 12:41 pm