ಧಾರವಾಡ: ಜಿಲ್ಲೆಗೊಂದು ಗೋ ಶಾಲೆ ಯೋಜನೆಯಡಿ ಧಾರವಾಡ ತಾಲೂಕಿನ ಮಾಧನಬಾವಿ ಗ್ರಾಮದಲ್ಲಿ ಬೃಹತ್ ಗೋ ಶಾಲೆ ನಿರ್ಮಾಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಸೇರಿದಂತೆ ಅನೇಕರು ಭೂಮಿಪೂಜೆ ನೆರವೇರಿಸಿದರು.
ಮಾಧನಬಾವಿ ಗ್ರಾಮದ 9 ಎಕರೆ 30 ಗುಂಟೆ ಜಾಗದಲ್ಲಿ ಒಟ್ಟು 53.50 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ.
ಭೂಮಿ ಪೂಜೆಗೂ ಮುನ್ನ ಸಚಿವರು ಹಾಗೂ ಶಾಸಕರು ಗೋವು ಪೂಜೆ ನೆರವೇರಿಸಿದರು. ಈ ವೇಳೆ ಗೋವು ಮಂಡಿಯೂರಿ ನಮಸ್ಕರಿಸಿದ್ದು ಗಮನಸೆಳೆಯಿತು. ಮನಗುಂಡಿಯ ಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶೂನ್ಯ ಬಂಡವಾಳ ಮತ್ತು ನೈಸರ್ಗಿಕ ಕೃಷಿ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಜಿಲ್ಲೆಗೊಂದು ಗೋ ಶಾಲೆ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಗೋ ತಳಿಗಳನ್ನು ಅಭಿವೃದ್ದಿ ಪಡಿಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಎಲ್ಲರೂ ನೌಕರಿಗಾಗಿ ಕಾಯುತ್ತ ಕುಳಿತುಕೊಳ್ಳದೇ, ವಿದ್ಯಾಂತರು ಹೈನುಗಾರಿಕೆಯಲ್ಲಿ ತೋಡಗಿಸಿಕೊಂಡರೆ ಯಶಸ್ವಿಯಾಗುವುದು ನಿಶ್ಚಿತ. ಉತ್ತಮವಾದ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ನೀಡಿದರೆ ಹೆಚ್ಚಿನ ಬೇಡಿಕೆ ಮತ್ತು ಲಾಭ ಇರುತ್ತದೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
Kshetra Samachara
23/04/2022 07:58 pm