ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಲ್ಲ ವರ್ಗದ ಹಿತಕಾಯ್ದ ನಾಯಕ ಅಂಬೇಡ್ಕರ್ : ಜೋಶಿ

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತೋತ್ಸವದ ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಹುಬ್ಬಳ್ಳಿಯಲ್ಲಿಂದು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಹುಬ್ಬಳ್ಳಿಯ ಪ್ರಧಾನ ಅಂಚೆ ಕಚೇರಿಯ ಎದುರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಶೋಷಿತ ವರ್ಗದ ಧ್ವನಿಯಾಗಿ ಹಾಗೂ ತಾವೇ ಶೋಷಣೆಗೆ ಒಳಗಾಗಿದ್ದರೂ ಕೂಡ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಸಂವಿಧಾನವನ್ನು ಬರೆದಿದ್ದಾರೆ ಎಂದರು.

ತಮ್ಮ ಜೀವನದಲ್ಲಿ ಸಾಕಷ್ಟು ಅವಮಾನ ಹಾಗೂ ಶೋಷಣೆ ಅನುಭವಿಸಿದರೂ ಕೂಡ ಎಲ್ಲ ವರ್ಗದ ಜನರ ಹಿತವನ್ನು ಕಾಪಾಡಿದ್ದಾರೆ. ಅಲ್ಲದೆ ದೇಶಕ್ಕೆ ಅವಿಸ್ಮರಣೀಯ ನೆನಪಿಡುವಂತ ಕೊಡುಗೆಯನ್ನು ಕೊಟ್ಟಿರುವುದು ನಿಜಕ್ಕೂ ಸ್ಮರಣೀಯವಾಗಿದೆ ಎಂದು ಅವರು ಹೇಳಿದರು.

Edited By : Shivu K
Kshetra Samachara

Kshetra Samachara

14/04/2022 11:53 am

Cinque Terre

30.31 K

Cinque Terre

3

ಸಂಬಂಧಿತ ಸುದ್ದಿ