ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನವನಗರದಲ್ಲಿ ರಂಗಪಂಚಮಿಯ ರಂಗಿನಾಟ- ಅಪ್ಪಾಜಿ ಕಾರ್ಯಕ್ಕೆ ಜನ ಫುಲ್ ಖುಷ್

ಹುಬ್ಬಳ್ಳಿ: ರಂಗಪಂಚಮಿ ಅಂದರೆ ಯಾರಿಗೆ ಇಷ್ಟ ಆಗಿಲ್ಲ ಹೇಳಿ? ವಯಸ್ಕರಿಂದ ಹಿಡಿದು ವೃದ್ಧರು ಕೂಡ ರಂಗಿನಾಟದಲ್ಲಿ ಮುಳುಗಿ ಕಲರ್ ಕಲರ್ ಆಗುತ್ತಾರೆ.

ಎಸ್.. ಹೀಗೆ ಒಂದು ಕಡೆ ಮಹಿಳೆಯರು, ಇನ್ನೊಂದೆಡೆ ಪುರುಷರು ಸಖತ್ತಾಗಿ ಸ್ಟೆಪ್ ಹಾಕುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ನವನಗರದಲ್ಲಿ. ಈ ರಂಗಪಂಚಮಿಯ ರಂಗಿನಾಟದಲ್ಲಿ ಎಲ್ಲರೂ ಭಾಗಿಯಾಗಿ ಸಂತೋಷದಿಂದ ಕುಣಿದು ಕುಪ್ಪಳಿಸಲೆಂದು ಅಪ್ಪಾಜಿ ಜನಸೇವಾ ಸಂಘದ ಮುಖ್ಯಸ್ಥ ಡಾ. ವಿಜಯಕುಮಾರ ಅಪ್ಪಾಜಿ ಅವರು, ನವನಗರದ ಪಂಚಾಕ್ಷರಿ ನಗರದ ಗಾರ್ಡನ್ ಒಂದರಲ್ಲಿ ದೊಡ್ಡ ಮಟ್ಟದಲ್ಲಿ ಶಾವರ್, ರಸಮಂಜರಿ ಕಾರ್ಯಕ್ರಮ, ಡ್ಯಾನ್ಸ್ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಲ್ಲಿನ ಜನರಲ್ಲಿ ಕಲರ್‌ಫುಲ್ ಡೇ ಮಾಡಿದ್ದಾರೆ. ಇದರಿಂದ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ.

Edited By : Manjunath H D
Kshetra Samachara

Kshetra Samachara

23/03/2022 08:09 pm

Cinque Terre

18.39 K

Cinque Terre

4

ಸಂಬಂಧಿತ ಸುದ್ದಿ