ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಕಸಾಪ ಗೆ ಸೋದರ ಹೆಸರಿನಲ್ಲಿ ದತ್ತಿ ದಾನ ; ಸಚಿವ ಮುನೇನಕೊಪ್ಪ

ಅಣ್ಣಿಗೇರಿ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಈಗಾಗಲೇ ಸಾಕಷ್ಟು ಪ್ರಮಾಣದ ಕನ್ನಡದ ಬಗ್ಗೆ ಕಾರ್ಯಕ್ರಮಗಳು ಆಗುತ್ತ ಬಂದಿವೆ. ಕನ್ನಡಕ್ಕಾಗಿ ಕೆಲಸ ಕಾರ್ಯಗಳನ್ನು ಮಾಡಲು ಸರ್ಕಾರ ನಿಮ್ಮ ಪರವಾಗಿ ಇರುತ್ತದೆ ಎಂದು ಸಚಿವರಾದ ಮುನೇನಕೊಪ್ಪ ಹೇಳಿದರು.

ಇವರು ಪಟ್ಟಣದಲ್ಲಿ ನಡೆದ ತಾಲೂಕು ಕಸಾಪ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಈಗಾಗಲೇ ನವಲಗುಂದ ತಾಲೂಕು ಕಸಾಪ ಗೆ ಒಂದು ದತ್ತಿ ದಾನಿಯನ್ನು ಕೊಟ್ಟಿರುತ್ತದೆ. ಅದೇ ರೀತಿ ಅಣ್ಣಿಗೇರಿ ತಾಲೂಕು ಕಸಾಪ ಗೆ ಹಿರಿಯ ಸೋದರ ಹನುಮಂತ ಗೌಡ್ರ ಹೆಸರಿನಲ್ಲಿ ದತ್ತಿ ದಾನಿ ಕೊಡುವುದಾಗಿ ಸಚಿವರು ತಿಳಿಸಿದರು.

ತಾಲೂಕಿನಲ್ಲಿ ಒಂದು ಕಸಾಪ ಭವನ ಆಗಬೇಕೆಂಬ ಕೂಗಿನ ಹಿನ್ನೆಲೆ ಪಟ್ಟಣದಲ್ಲಿ ಸರ್ಕಾರದಿಂದ ಭವನ ನಿರ್ಮಿಸಿಕೊಡಲು ನಾನು ಸಿದ್ಧವಿದ್ದೇನೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಕನ್ನಡ ಬೆಳೆಸಿ ಕನ್ನಡ ಉಳಿಸಿ ಕನ್ನಡಕ್ಕೆ ಹೆಚ್ಚು ಆದ್ಯತೆ ಕೊಡಿ ಕನ್ನಡ ತಾಯಿಯ ಮಕ್ಕಳಾಗಿ ಬದುಕೋಣ ಕನ್ನಡ ಭಾಷೆಗೆ ಇರುವ ಹಿತ ಬೇರೆ ಯಾವ ಭಾಷೆಗಳಲ್ಲಿ ಸಿಗುವುದಿಲ್ಲ ಎಂದು ಹೇಳಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಡಾ ವಾಲಿ ಮಹಾರಾಜರು,ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಅಂಗಡಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

21/03/2022 12:57 pm

Cinque Terre

49.31 K

Cinque Terre

2

ಸಂಬಂಧಿತ ಸುದ್ದಿ