ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ನೃತ್ಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಹಾಕೂಟ

ಹುಬ್ಬಳ್ಳಿ: ಇಂದಿನ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಮ್ಮ ಹುಬ್ಬಳ್ಳಿಯ ಮಯೂರಿ ನೃತ್ಯ ಅಕಾಡೆಮಿಯ ವಿದ್ಯಾರ್ಥಿನಿಯರಾದ ಶ್ರದ್ಧಾ ಬದ್ದಿ, ಸೋನಲ್ ಬದ್ದಿ, ಸಂಗೀತಾ ಜಾಲಹಳ್ಳಿ, ಯುಕ್ತಾ ಕದಂಬ, ಶಿಲ್ಪಾ ಭುರೆ, ನೇತ್ರಾವತಿ ಬದ್ದಿ, ಸಿಂಚನಾ ರಾಮನಗೌಡರ, ದಿವ್ಯಾ ಸೂಜಿ, ಶ್ರೀಲಕ್ಷ್ಮಿ ತಾಂಬೆ, ಪೂಜಾ ವಾಗ್ಮೊಡೆ ಅವರು ಪಾಲ್ಗೊಂಡು ಆಕರ್ಷಕ ಸಾಂಪ್ರದಾಯಿಕ ನೃತ್ಯವನ್ನು ರಾಷ್ಟ್ರಪತಿ ಮತ್ತು ಪ್ರಧಾನಿಯವರ ಸಮ್ಮುಖದಲ್ಲಿ ಪ್ರಸ್ತುತ ಪಡಿಸಿ ಅವರಿಂದ ಅಭಿನಂದನೆ ಪಡೆದರು.

ಇದೇ ಸಮಯದಲ್ಲಿ ಇಂದಿನ ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪಾಲ್ಗೊಂಡ ಸಂಭ್ರಮವನ್ನು ಸಚಿವ ಪ್ರಹ್ಲಾದ್ ಜೋಶಿ ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದರು. ಸಂಜೆ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳನ್ನು ತಮ್ಮ ಗೃಹ ಕಛೇರಿಗೆ ಆಮಂತ್ರಿಸಿ ಅವರುಗಳನ್ನು ಅಭಿನಂದಿಸಿ ಅವರೊಂದಿಗೆ ಚಹಾ ಕೂಟದಲ್ಲಿ ಪಾಲ್ಗೊಂಡರು.

ಚಹಾಕೂಟದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸಿದರಲ್ಲದೆ ಸಚಿವರೊಂದಿಗೆ ಭಾವಚಿತ್ರವನ್ನು ತೆಗೆಸಿಕೊಂಡು ಸಂಭ್ರಮಿಸಿದರು.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/01/2022 10:04 pm

Cinque Terre

130.39 K

Cinque Terre

3

ಸಂಬಂಧಿತ ಸುದ್ದಿ