ಅಳ್ನಾವರ: ತಾಲೂಕಿನ ಪಂಚಾಯತಿ ಕಚೇರಿ, ಸಂತೋಷ ಲಾಡ್ ನಾಡ ಕಚೇರಿ,ಬಸ್ ನಿಲ್ದಾಣ ಹೀಗೆ ಅನೇಕ ಸ್ಥಳಗಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ತಹಶೀಲ್ದಾರ ರಾದ ಮಾಧವ್ ಗಿತ್ತೆ ಅವರು ಪಟ್ಟಣ ಪಂಚಾಯಿತಿ ಆವರಣದಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಅವರ ಭಾವ ಚಿತ್ರಕ್ಕೆ ಮಾಲೆ ಹಾಕಿ ಸಿಹಿ ಹಂಚಿದರು.
ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆಕ್ಟೊಬರ್ 2 ರ ವಿಶೇಷ ದಿನದ ಅಂಗವಾಗಿ ಎರಡು ದಿನ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನವನ್ನು ಮುಂದುವರೆಸಿ,ಪಟ್ಟಣವನ್ನು ಕಸ ಮುಕ್ತ ಪಟ್ಟಣವನ್ನಾಗಿ ಮಾಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರ ಜೊತೆ ಸೇರಿ ತಹಶೀಲ್ದಾರ್ ರಾದ ಮಾಧವ್ ಗಿತ್ತೆ ಅವರು ಊರು ಸ್ವಚ್ಛ ಗೊಳಿಸಿದರು
ಪಟ್ಟಣದ ಬಸ್ ನಿಲ್ದಾಣದ ಆವರದಲ್ಲಿ ಭ್ರಷ್ಟರ ಭೇಟೆ ಕನ್ನಡ ಮಾಸಿಕ ಪತ್ರಿಕೆ ವತಿಯಿಂದ ಹಾಗೂ ಅಳ್ನಾವರ ತಾಲೂಕಿನ ಪಂಚಾಯತ್ ಆಡಳಿತ ಅಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು.
Kshetra Samachara
03/10/2021 11:54 am