ಕುಂದಗೋಳ : ಕಮಡೊಳ್ಳಿ ಗ್ರಾಮದಲ್ಲಿ ಮೂಲ ಸೌಕರ್ಯಗಳ ಬೇಡಿಕೆ ಈಡೇರಿಸುವಂತೆ ಸ್ಥಳೀಯರು ಮನವಿ ಮಾಡಿದ್ದೀರಿ ಆ ಎಲ್ಲಾ ಮೂಲಭೂತ ಸೌಕರ್ಯ ಕೈಗೊಂಡು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡುತ್ತೇನೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕಮಡೊಳ್ಳಿ ಗ್ರಾಮ ಪಂಚಾಯಿತಿ ಅವರಣದಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನದ ಉದ್ಘಾಟನೆ ಘನ ತ್ಯಾಜ್ಯ ಕಸ ವಿಲೇವಾರಿ ಕಸದ ಪೆಟ್ಟಿಗೆ ವಿತರಣೆ ಮತ್ತು ಘನತ್ಯಾಜ್ಯ ಘಟಕದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಬೃಹತ್ ಗ್ರಾಮ ಕಮಡೊಳ್ಳಿಯಲ್ಲಿ ಆಗಬೇಕಾದ ಕೆಲಸ ಸಾಕಷ್ಟಿದೆ ಎಂದರು. ಬಳಿಕ ಮಾಜಿ ಶಾಸಕ ಎಂ.ಎಸ್.ಅಕ್ಕಿ ಮಾತನಾಡಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕಿ ಕುಸುಮಾವತಿ ಅಭಿವೃದ್ಧಿ ಕಾರ್ಯಗಳಿಂದಲೇ ತಾಲೂಕಿನಲ್ಲಿ ಜನಪ್ರೀಯತೆ ಗಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಜುಟ್ಟಲ್, ರಾಜೇಂದ್ರ ಶಿರಮಣ್ಣವರ, ಶೇಖರ್ ಮರೆಪ್ಪನವರ, ವಿಶ್ವನಾಥ್ ಜುಟ್ಟಲ್, ಮಹಮ್ಮಹನಿಫ ದರೂಬಾಯಿ, ಮಂಜುನಾಥ್ ತಳಗೇರಿ, ಕಲ್ಲಪ್ಪ ತಿರಕೂಡ, ಈಶ್ವರ ಬರದೇಲಿ ಶಾಂತವ್ವ ಕೀರೆಸೂರ, ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಮಾಜಿ ಶಾಸಕ ಎಂ.ಎಸ್.ಅಕ್ಕಿಯವರಿಗೆ ಸನ್ಮಾನ ಮಾಡಲಾಯಿತು.
Kshetra Samachara
13/09/2021 07:59 pm