ನವಲಗುಂದ: ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಮಂಡಲದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಪ್ರಾರಂಭದ ಮುಂಚೆ ಇತ್ತೀಚಿಗೆ ನಿಧನರಾದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿವಂಗತ ಶ್ರೀ ಬಸವರಾಜ ನಂದಮ್ಮನವರ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ನವಲಗುಂದ ತಾಲೂಕಿನ ಅಧ್ಯಕ್ಷ ಎಸ್.ಬಿ. ದಾನಪ್ಪಗೌಡ್ರ , ಈರಣ್ಣ ಹಸಬಿ, ಮಹಾತೇಶ್ ಕಾರಿಕಾಯಿ, ಮಂಜುನಾಥ್ ಇಮ್ಮಡಿ, ಅಡಿವೆಪ್ಪ ಶಿರಸಂಗಿ, ಪ್ರಕಾಶ ಗೌಡ್ರ ಬಾಳನಗೌಡ್ರ ಹಾಗೂ ರೈತ ಮೋರ್ಚಾ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
25/08/2021 11:59 pm