ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯರಾಗಿದ್ದ ದೀಪಕ ಶಿವಾಜಿ ಪಟದಾರಿ ಕೊಲೆ ತನಿಖೆನ್ನು ಸಿಐಡಿ ತನಿಖೆಗೆ ನೀಡಬೇಕು. ಮತ್ತು ತನಿಖೆಯನ್ನು ಶೀಘ್ರದಲ್ಲಿ ಮುಗಿಸಬೇಕೆಂದು ಆಗ್ರಹಿಸಿ ಹತ್ಯೆಯಾದ ದೀಪಕ್ ಪಟದಾರಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ ಶಿವಾಜಿ ಪಟದಾರಿ ಭೀಕರ ಹತ್ಯೆಯ ಪ್ರಮುಖ ಆರೋಪಿಗಳನ್ನು ಪೋಲಿಸ್ ಇಲಾಖೆಯು ತನಿಖೆಯಿಂದ ಕೈ ಬಿಟ್ಟಿದ್ದು ಖಂಡನೀಯ. ಆದ್ದರಿಂದ ಪೊಲೀಸ್ ಇಲಾಖೆಯು ಮೂಲ ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಬೇಕೆಂದು ಆಗ್ರಹಿಸಲಾಯಿತು.
ಒಂದು ವೇಳೆ ನಿಜವಾದ ಆರೋಪಿಗಳನ್ನು ಬಂಧನ ಮಾಡದೇ ಇದ್ದರೆ ಗಂಗಿವಾಳ ಗ್ರಾಮದ ಎಲ್ಲಾ ಮುಖಂಡರು ಸೇರಿ ಜುಲೈ 18 ರಂದು ಸೋಮವಾರದಂದು ಬೆಳಗಾವಿ ಭಾಗದ ಐಜಿ ಕಚೇರಿ ಎದುರುಗಡೆ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
Kshetra Samachara
16/07/2022 04:08 pm