ನವವಿವಾಹಿತೆಯೊಬ್ಬರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಭೆಗೆ ಗೋಕುಲ ರೋಡ್ ಪೊಲೀಸ್ ಠಾಣೆ ಖಾಕಿ ಪಡೆ ಆಗಮಿಸಿದೆ.
ಹೌದು... ಕಾರ್ಪೊರೇಟರ್ ಚೇತನ್ ಹಿರೇಕೆರೂರ್ ಅರೆಸ್ಟ್ ಮಾಡಲು ಗೋಕುಲ ರೋಡ್ ಇನ್ಸ್ ಪೆಕ್ಟರ್ ಜೆ.ಎಂ.ಕಾಲಿಮಿರ್ಚಿಯವರು ಆಗಮಿಸಿದ್ದಾರೆ. ಆದರೆ, ಸಭೆಗೂ ಚೇತನ್ ಗೈರು ಆಗಿದ್ದು, ಆ ಹಿನ್ನೆಲೆಯಲ್ಲಿ ಪಾಲಿಕೆಯ ಸಭಾಂಗಣದಲ್ಲಿಯೇ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ಕಾಯುತ್ತಿದ್ದಾರೆ.
ನವವಧುವನ್ನು ಕಿಡ್ನ್ಯಾಪ್ ಮಾಡಿದ ಆರೋಪ ಹಿನ್ನೆಲೆಯಲ್ಲಿ ಚೇತನ್ ಗಾಗಿ ಹುಡುಕಾಟ ನಡೆಸಿರುವ ಖಾಕಿ ಪಡೆ, ಕಾರ್ಪೊರೇಟರ್ ನನ್ನು ಅರೆಸ್ಟ್ ಮಾಡಲು ಕಾಯುತ್ತಿದ್ದಾರೆ. ಪಕ್ಷೇತರ ಸದಸ್ಯ ಚೇತನ್, ಜೂನ್ 26 ರಿಂದ ನಾಪತ್ತೆಯಾಗಿದ್ದು, ಪಾಲಿಕೆ ಸಾಮಾನ್ಯ ಸಭೆಗೆ ಬರುವ ಮಾಹಿತಿ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲು ಪಾಲಿಕೆಯ ಆವರಣಕ್ಕೆ ಗೋಕುಲ್ ರೋಡ್ ಪೊಲೀಸರು ಬಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 07:26 pm