ಧಾರವಾಡ: ನನ್ನ ಮಗನ ಸಾವಿಗೆ ನ್ಯಾಯಾ ಸಿಗೋ ಭರವಸೆ ಐತಿ. ಇಂದು ವಿನಯ ಕುಲಕರ್ಣಿ ಅವರನ್ನ ವಿಚಾರಣೆಗೊಳಪಡಿಸಿದ್ದು, ಖುಷಿ ಕೊಟ್ಟೈತಿ ಅಂತಾ ಯೋಗೀಶಗೌಡ ಗೌಡರ ಅವರ ತಾಯಿ ತುಂಗಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಗೋವನಕೊಪ್ಪದ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿರುವ ತುಂಗಮ್ಮ, ನನ್ನ ಮಗನ ಹತ್ಯೆಯಾಗಿ 4 ವರ್ಷ ಆಯ್ತು. ಅವನ ಆತ್ಮಕ್ಕೆ ಶಾಂತಿ ಸಿಗೋ ಭರವಸೆ ಐತ್ರಿ. ನನ್ನ ಮಗ ಗುರುನಾಥಗೌಡ ಇದರ ಸಂಬಂಧ ಬಾಳ ಹೋರಾಟ ಮಾಡ್ಯಾನ್ರಿ ಎಂದಿದ್ದಾರೆ
Kshetra Samachara
05/11/2020 12:44 pm