ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಉತ್ತರ ಪ್ರದೇಶ ಘಟನೆ ಖಂಡಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ

ಅಳ್ನಾವರ: ಉತ್ತರ ಪ್ರದೇಶದ ಯುವತಿ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ಹಮ್ಮಿಕೊಂಡಿತ್ತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಸಚಿವ ಸಂತೋಷ್ ಲಾಡ್ ಅವರ ಮಾರ್ಗದರ್ಶನದಲ್ಲಿ ಈ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಶ್ರೀಕಾಂತ ಗಾಯಕವಾಡ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಘಾಟಿನ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಜನರಿಗೆ ರಕ್ಷಣೆ ಇಲ್ಲದಾಗಿದೆ .

ಅದರಲ್ಲೂ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಸರ್ಕಾರ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ .ಇದು ಜನರ ಧ್ವನಿಯನ್ನು ಧಮನ ಮಾಡುವ ಕೆಲಸವಾಗಿದೆ. ಜನರು ಭಯದಲ್ಲಿಯೆ ಬದುಕುವಂತಾಗಿದೆ ಎಂದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದ ರಾಜ್ಯ ಸರ್ಕಾರ ಕ್ರಮವನ್ನು ಪ್ರತಿಭಟನಾಕಾರರು ತೀವೃವಾಗಿ ಖಂಡಿಸಿದರು.

ಈ ಪ್ರಕರಣದಲ್ಲಿ ಮರಣ ಹೊಂದಿದ ಯುವತಿಗೆ ನ್ಯಾಯ ಒದಗಿಸಲು ತೆರಳುತ್ತಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರನ್ನು ಪೊಲೀಸ್‌ರು ತಡೆದು ಹಲ್ಲೆ ಮಾಡಿರುವದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ ಹೇಳಿದರು.

ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ದ ಕ್ರಮಕೈಕೊಳ್ಳವಂತೆ ನೀಡಿದ ಮನವಿಯನ್ನು ತಹಶೀಲ್ದಾರ್ ಅಮರೇಶ ಪಮ್ಮಾರ ಸ್ವೀಕರಿಸಿ, ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ಎಂ.ಎಂ. ತೇಗೂರ, ಅನ್ವರಖಾನ ಬಾಗೇವಾಡಿ, ಹಸನಲಿ ಶೇಖ, ಮಧು ಬಡಸ್ಕರ, ರಮೇಶ ಕನ್ನೂರಕರ, ಭಾಗ್ಯವತಿ ಕುರುಬರ, ಸ್ನೇಹಶ್ರೀ ಕಿತ್ತೂರ, ಶಾಲೆಟ್ ಬರೆಟ್ಟೋ, ರಶ್ಮೀ ತೇಗೂರ, ಸತ್ತಾರ ಬಾತಖಂಡೆ, ಸುರೇಂದ್ರ ಕಡಕೋಳ, ರಾಯಪ್ಪ ಹುಡೇದ, ನೂರಅಹ್ಮದ ಕಿತ್ತೂರ, ಮಾರುತಿ ಬಾಂಗಡಿ, ಹನಮಂತ ಶಿಂಧೆ, ಅಮೀನಾಬಾನು ನಧಾಪ, ಮಲ್ಲಪ್ಪ ಗಾಣಿಗೇರ, ಪರಶುರಾಮ ಬೇಕನೇಕರ, ಕಿರಣ ಗಡಕರ, ಮಂಜುನಾಥ ಕುಳೇನವರ ಇದ್ದರು.

Edited By :
Kshetra Samachara

Kshetra Samachara

07/10/2020 07:39 pm

Cinque Terre

13.67 K

Cinque Terre

1

ಸಂಬಂಧಿತ ಸುದ್ದಿ