ಹುಬ್ಬಳ್ಳಿ: ಅಪ್ಪು ಅಂದರೇ ಎಲ್ಲರಿಗೂ ಪ್ರಾಣ,,,,, ಅಂತಹ ನಿಗರ್ವಿ, ಪರೋಪಕಾರಿಯ ಕೊನೆಯ ಸಿನಿಮಾವನ್ನು ಹುಬ್ಬಳ್ಳಿಯ ನೂರಾರು ಜನರಿಗೆ ತಮ್ಮ ಸ್ವಂತ ಹಣದಿಂದ ಸಿನಿಮಾ ತೋರಿಸಿ ತನ್ನ ಅಭಿಮಾನವನ್ನು ಹೆಚ್ಚಿಸಿಕೊಂಡು ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಆತನ ಸೇವೆ ಹಾಗೂ ಅಭಿಮಾನ ಹೇಗಿದೆ ಎಂಬುದನ್ನ ತೋರಿಸ್ತಿವಿ ನೋಡಿ...
ಎಸ್....ಆತ ಸಮಾಜ ಸೇವಕ, ಪ್ರತಿಯೊಂದು ಕ್ಷೇತ್ರದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಶ್ರಮಿಸುತ್ತಿರುವ ಧೀಮಂತ ನಾಯಕ. ಅವರೆ ಎಲ್ಲರ ಪ್ರೀತಿಯ ಒನ್ & ಓನ್ಲಿ ,,,, ಹುಬ್ಬಳ್ಳಿ ಜನರ ಪ್ರೀತಿಯ ಮಗ ಡಾ.ವಿಜಯಕುಮಾರ್ ಅಪ್ಪಾಜಿ. ಹುಟ್ಟಿನಿಂದಲೇ ಹೋರಾಟದ ಮನೋಭಾವ ಹೊಂದಿರುವ ಇವರಿಗೆ ಅಪ್ಪು ಅಂದರೇ ಬಹಳ ಇಷ್ಟ.
ಕೇವಲ ತಾವು ಮಾತ್ರ ಸಿನಿಮಾ ನೋಡಿದ್ರೆ ಏನು ಪ್ರಯೋಜನ ಎಂದುಕೊಂಡ ಅವರು ತಮ್ಮ ಹಣದಿಂದಲೇ ವಾರ್ಡ್ ನಂಬರ್ 28 ರ ಮಹಿಳೆಯರಿಗೆ, ವೃದ್ಧರು ಸೇರಿದಂತೆ 300 ಕ್ಕೂ ಹೆಚ್ಚು ಜನರಿಗೆ ಜೇಮ್ಸ್ ಸಿನಿಮಾ ತೋರಿಸಿ ಅಗಲಿದ ಅಪ್ಪುವಿಗೆ ಪ್ರೀತಿಯ ಧಾರೆ ಎರೆದಿದ್ದಾರೆ ಈ ಅಪ್ಪಾಜಿ.
ಅಪ್ಪಾಜಿಯ ಮಹತ್ವದ ಸಮಾಜ ಸೇವೆಗೆ ವಾರ್ಡ್ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಜೇಮ್ಸ್ ನೋಡಲು ಬಂದಿದ್ದ ಮಹಿಳೆಯರ ಜೊತೆ ಅಪ್ಪಾಜಿ ಸಖತ್ ಸ್ಟೇಪ್ ಹಾಕಿ ಮಹಿಳೆಯರನ್ನೂ ಹುರಿದುಂಬಿಸಿದ್ದಾರೆ. ಅಪ್ಪಾಜಿ ಅಪರಂಜಿ ಎಂದು ಎಲ್ಲರೂ ಗುಣಗಾನ ಮಾಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಪ್ಪಾಜಿ, ಕೆಲವೇ ಮತಗಳ ಅಂತರದಲ್ಲಿ ಸೋಲು ಕಂಡಿದ್ರು. ಆದರೆ ಸೋಲು ಕಂಡ ತಕ್ಷಣವೆ ವಾರ್ಡ್ ಜನತೆಯನ್ನು ಮರೆಯದೇ ನಿರಂತರವಾಗಿ ಅಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸುವುದರ ಜೊತೆಗೆ ಅಲ್ಲಿನ ಜನರಿಗೆ ಉತ್ತೇಜನ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅಪ್ಪಾಜಿ ಕಾರ್ಯ ಇದೊಂದೇ ಅಲ್ಲ ಹಸಿದ ಜೀವಗಳಿಗೆ ಅನ್ನ ನೀಡುವ ಕೆಲಸ ಮಾಡಿದ್ದಾರೆ. ಹಸಿರೇ ಉಸಿರು ಎಂದು ಗಿಡ ನೆಟ್ಟಿದ್ದಾರೆ. ಇವೆಲ್ಲವೂ ಅವರು ತಮ್ಮ ಸ್ವಂತ ಹಣದಿಂದ ಖರ್ಚು ಮಾಡಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾರೆ.
ಒಟ್ಟಿನಲ್ಲಿ ಅಪ್ಪಾಜಿ ಹೆಸರು ತಕ್ಕಂತೆ ಅಪರಂಜಿಯಾಗಿ,,, ಮಹಿಳೆಯರ ಪಾಲಿಗೆ ಅಣ್ಣನಾಗಿ,,, ನಿರಂತರವಾಗಿ ವಾರ್ಡ್ ನಂಬರ್ 28 ರಲ್ಲಿ ಸಮಾಜ ಸೇವೆ ಮಾಡುತ್ತಿರುವ ಅಪ್ಪಾಜಿ, ಹಿರಿಯರು ಕಿರಿಯರು ಆರ್ಶೀವಾದ ಮಾಡುತ್ತಿರುವುದು ನೋಡಿದ್ರೆ ಅಪ್ಪಾಜಿ ಅಪ್ಪು ಅಭಿಮಾನಿಯಾಗಿರುವುದು ಸಾರ್ಥಕವಾಗಿದೆ ಎನ್ನಬಹುದು.....
Kshetra Samachara
20/03/2022 09:18 am