ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತಡರಾತ್ರಿ ವಿನಯ್ ಕುಲಕರ್ಣಿ ಮನೆಗೆ ಡಿ ಬಾಸ್‌ ಭೇಟಿ

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ನಟ ದರ್ಶನ ಅವರ ಗೆಳೆತನ ಇಂದು ನಿನ್ನೆಯದಲ್ಲ, ಹಲವು ವರ್ಷಗಳ ಸ್ನೇಹ. ಇದೇ ಕಾರಣದಿಂದ ದರ್ಶನ ಆಗಾಗ ಸ್ನೇಹಿತನ ಮನೆಗೆ ಭೇಟಿ ನೀಡುತ್ತಿರುತ್ತಾರೆ. ರಾತ್ರಿ ಹನ್ನೆರಡು ಗಂಟೆಗೆ ಆಗಮಿಸಿದ ವಿನಯ್ ಕುಲಕರ್ಣಿ ಅವರ ಮನೆಗೆ ಆಗಮಿಸಿದ ಡಿ ಬಾಸ್, ಸ್ನೇಹಿತನ ಕುಟುಂಬದವರಿಗೆ ಧೈರ್ಯ ತುಂಬಿದರು.

ಹುಬ್ಬಳ್ಳಿಯಲ್ಲಿ ನಿನ್ನೆ ರಾಬರ್ಟ್ ಸಿನಿಮಾ ಆಡಿಯೋ ರೀಲಿಸ್‍ಗಾಗಿ ಆಗಮಿಸಿದ್ದ ನಟ ದರ್ಶನ್, ಮಧ್ಯಾಹ್ನವೇ ಕುಲಕರ್ಣಿ ಮನೆಗೆ ಭೇಟಿ ಮಾಡುತ್ತಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಬೆಳಿಗ್ಗೆಯಿಂದಲೇ ವಿನಯ ಕುಲಕರ್ಣಿ ಅವರ ಮನೆಯ ಸುತ್ತಲೂ ನೂರಾರೂ ಅಭಿಮಾನಿಗಳು ಆಗಮಿಸಿದ್ದರು. ಆದರೆ ರಾಬರ್ಟ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಬಗ್ಗೆ ಹೆಚ್ಚು ಕಾರ್ಯವಿದ್ದ ಕಾರಣ ನಟ ದರ್ಶನ ಬರಲು ಆಗಿರಲಿಲ್ಲ. ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಕಾರ್ಯಕ್ರಮ ಮುಗಿದ ತಕ್ಷಣವೇ ದರ್ಶನ್ ಅವರು ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಭೇಟಿ ನೀಡಿದರು.

Edited By : Vijay Kumar
Kshetra Samachara

Kshetra Samachara

01/03/2021 10:02 am

Cinque Terre

48.75 K

Cinque Terre

3

ಸಂಬಂಧಿತ ಸುದ್ದಿ