ಹುಬ್ಬಳ್ಳಿ : ಈಗ ನಾನು ನಿಮ್ಮ ಮುಂದೆ ಮಂತ್ರಿಯಾಗಿ ನಿಂತಿರಬಹುದು ಆದರೆ ರಾಜಕಾರಣಿ, ಮಂತ್ರಿಯಾಗುವ ಮೊದ್ಲು ನಾನೂ ಒಬ್ಬ ಉದ್ಯಮಿಯೇ ಆಗಿದ್ದೆ. ಮನೆ ಮನೆ ಸುತ್ತಿ ಫಿನಾಯಿಲ್ ಮಾರಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಉದ್ಯಮದ ಅನುಭವವನ್ನು ಮಾರ್ಮಿಕವಾಗಿ ಹಂಚಿಕೊಂಡರು.
ದೇಶಪಾಂಡೆ ಫೌಂಡೆಶನ್ ದಲ್ಲಿ ಶನಿವಾರ ನವೋದ್ಯಮಿಗಳಿಗಾಗಿ ಹಮ್ಮಿಕೊಂಡಿದ್ದ " ಸ್ಟಾರ್ಟ್ಪಪ್ ಡೈಲಾಗ್'' ಕಾರ್ಯಕ್ರಮದಲ್ಲಿ ಸಚಿವರು ತಮ್ಮ ಔದ್ಯಮಿಕ ಬದುಕಿನ ಆರಂಭದಲ್ಲಿ ಎದುರಿಸಿದ ಸವಾಲುಗಳನ್ನು ವಿವರಿಸಿದರು.
ಈಗ ನಿಮಗಿರುವಂತೆ ನನಗೆ ಯಾವುದೇ ಟ್ರೇನಿಂಗ್, ಮಾರ್ಕೆಟಿಂಗ್, ಫೈನಾನ್ಸ ಸೌಲಭ್ಯವಿರಲಿಲ್ಲ. ಫಿನಾಯಿಲ್ ಮಾರುವವರೆಂದು ಬ್ಯಾಂಕ್ ಮಾನ್ಯೇಜರ್ ತಮ್ಮ ಕ್ಯಾಬಿನ್ ಒಳಗೂ ಬಿಟ್ಟುಕೊಳ್ಳುತ್ತಿರಲಿಲ್ಲ, ಇನ್ನು ಸಾಲ ನೀಡುವದಂತೂ ದೂರದ ಮಾತು.
ಫಿನಾಯಿಲ್ ಉದ್ಯಮ ಪ್ರಾರಂಭಕ್ಕೆ ೧೦ ಸಾವಿರ ರೂ ಕೊಡಿ ಎಂದು ತಂದೆಗೆ ಕೇಳಿದೆ. ಆದ್ರೆ ಸಿಕ್ಕಿದ್ದು ಕೇವಲ ಐದು ಸಾವಿರ ,ಅದೂ ಎರಡು ಇನ್ಸ್ಟಾಲ್ಮೆಂಟ್ ಗಳಲ್ಲಿ. ಆದರೂ ಏನಾದರೂ ಮಾಡಬೇಕೆಂಬ ಛಲ ಇದ್ದ ಕಾರಣ ಮನೆ ಮನೆ ಓಡಾಡಿ ಫಿನಾಯಿಲ್ ಮಾರಾಟ ಮಾಡಿ ಉದ್ಯಮ ಬೆಳೆಸಿದೆವು. ಇಂದು ಅದು ೮೦೦ ಜನರಿಗೆ ಉದ್ಯೋಗ ನೀಡಿದ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಸಚಿವರು ಆಡಿದ ಮಾತುಗಳು ಯುವೋದ್ಯಮಿಗಳಿಗೆ ಪ್ರೋತ್ಸಾಯದಾಯಕವಾದವು ಮತ್ತು ಸ್ಫೂರ್ತಿ ತುಂಬಿದವು.
ದೇಶಪಾಂಡೆ ಫೌಡೇಶನ್ ದಂತ ಸಂಸ್ಥೆ ನಿಮಗೆ ಎಲ್ಲ ರೀತಿ ಮಾರ್ಗದರ್ಶನ ನೀಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರಕಾರ ಎಲ್ಲ ರೀತಿ ಪ್ರೋತ್ಸಾಹ ನೀಡುತ್ತಿದೆ. ಇವುಗಳ ಸದುಪಯೋಗ ಪಡೆದುಕೊಂಡು ಉದ್ಯೋಗದಾತಾರಾಗಿ ನೂರಾರು ಜನರಿಗೆ ಉದ್ಯೋಗ ನೀಡಿ ಕೇವಲ ಒಬ್ಬ ಉದ್ಯೋಗಿಯಾಗಬೇಡಿ ಸಚಿವರು ಸಲಹೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2022 12:59 pm