ಧಾರವಾಡ: ನಾನು ರಾಜಸ್ಥಾನಕ್ಕೆ ಕುದರಿ ತರಾಕ ಹೋಗಿದ್ದೆ.. ನಾ ಯಾರನ್ನೂ ಭೇಟಿ ಆಗಿಲ್ರಿ.. ಬಿಜೆಪಿ ಸೇರೋ ಅಗತ್ಯ ನನಗೇನೈತ್ರಿ? ಅಂತಾ ಮಾಜಿ ಸಚಿವ ವಿನಯ ಕುಲಕರ್ಣಿ ತಮ್ಮದೇ ಶೈಲಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಗೆ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಸಚಿವ ವಿನಯ ಕುಲಕರ್ಣಿ ಅವರು, ಬಿಜೆಪಿ ಸೇರಲು ದೆಹಲಿಗೆ ಹೋಗಿದ್ದಾರೆ. ಆ ನಾಯಕರನ್ನು ಭೇಟಿ ಆಗಿದ್ದಾರೆ, ಈ ನಾಯಕರನ್ನು ಭೇಟಿ ಆಗಿದ್ದಾರೆ ಎಂಬುದು ಊಹಾಪೋಹ ಅಷ್ಟೆ. ಯಾವುದೋ ಒಂದು ಮಾಧ್ಯಮದವರು ಈ ರೀತಿ ಸೃಷ್ಟಿ ಮಾಡ್ಯಾರ್ರೀ.. ನಾ ಯಾರನ್ನಾದ್ರೂ ಭೇಟಿ ಆಗಿರೋ ವಿಡಿಯೋ, ಫೋಟೋ ಇದ್ರ ಅವನ್ನ ಹಾಕಿ ಸುದ್ದಿ ಬರೀರಿ ಅಂತಾ ಹೇಳ್ರಿ ನೋಡೋಣ ಎಂದು ವಿನಯ್ ಸವಾಲು ಹಾಕಿದ್ದಾರೆ.
ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ ವಿನಯ್ ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಊಹಾಪೋಹ ಹುಟ್ಟಿಕೊಂಡಿದೆ.
Kshetra Samachara
06/10/2020 03:14 pm