ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಟೊಮೆಟೊ ಕಟಾವು ಮಾಡೋದಾ..ಇದೇನಿದು ಡಿಫರಂಟ್ ಪ್ರತಿಭಟನೆ

ಧಾರವಾಡ: ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಧರಣಿಯ ಬೆಂಬಲಾರ್ಥ ಧಾರವಾಡದಲ್ಲೊಂದು ಡಿಫರಂಟ್ ಪ್ರತಿಭಟನೆ ನಡೆದಿದೆ.

ಹೌದು! ಧಾರವಾಡದ ನವಲೂರಿನಲ್ಲಿರುವ ಕಟಾವಿಗೆ ಬಂದ ಟೊಮೆಟೊ ತೋಟಕ್ಕೆ ಹೋದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಆ ಜಮೀನಿನ ರೈತನಿಗೆ ಟೊಮೆಟೊ ಕಟಾವು ಮಾಡಿಕೊಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಇಂದು ರೈತ ದಿನಾಚರಣೆಯಾದರೂ ಅದನ್ನು ಆಚರಣೆ ಮಾಡದಂತಾಗಿದೆ. ರೈತರಿಗೆ ಮರಣ ಶಾಸನವಾಗುವಂತಹ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದಿದೆ. ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಅವರತ್ತ ಗಮನವನ್ನೂ ಹರಿಸಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ದೀಪಾ ಗೌರಿ ಸೇರಿದಂತೆ ಹಲವಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Edited By : Nagesh Gaonkar
Kshetra Samachara

Kshetra Samachara

23/12/2020 07:28 pm

Cinque Terre

92.23 K

Cinque Terre

7

ಸಂಬಂಧಿತ ಸುದ್ದಿ