ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂರುಸಾವಿರ ಮಠದ ಆಸ್ತಿ ಹಾಳಾಗಲು ನಾನು ಜೀವಂತ ಇರುವವರೆಗೂ ಸಾಧ್ಯವಿಲ್ಲ: ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವವಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯನ್ನು ಹೊಡೆಯಲು ಸಾಕಷ್ಟು ಜನರು ಹೊಂಚು ಹಾಕಿದ್ದಾರೆ.ಕೆಲವರು ಆಸ್ತಿಯನ್ನು ಬರೆಸಿಕೊಂಡಿದ್ದಾರೆ. ಅಲ್ಲದೇ ಕೆಎಲ್ಇ ಸಂಸ್ಥೆಯವರು ಕೂಡ ಕಾಲೇಜು ಕಟ್ಟಡಕ್ಕೆ ಮೂರುಸಾವಿರ ಮಠದ ಆಸ್ತಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.ನನ್ನ ಜೀವ ಇರುವವರೆಗೂ ಮೂರುಸಾವಿರ ಮಠದ ಆಸ್ತಿಯನ್ನು ಕಬಳಿಸಲು ಬಿಡುವುದಿಲ್ಲ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ.ಆದರೇ ಕೆಎಲ್ಇ ಸಂಸ್ಥೆಯವರು ಮೂರುಸಾವಿರ ಮಠದ 24 ಎಕರೆ ಜಮೀನನ್ನು ಬಳಸಿಕೊಂಡು ಕಾಲೇಜು ಕಟ್ಟಿಸಲು ಮುಂದೆ ಬಂದಿದೆ.ಆದರೇ ಕೆಎಲ್ಇ ಸಂಸ್ಥೆ ಬೆಳೆಯ ಬೇಕು ಅದೇ ರೀತಿ ಮೂರುಸಾವಿರ ಮಠದ ಆಸ್ತಿಯೂ ಉಳಿಯಬೇಕು. ಈ ಹಿನ್ನೆಲೆಯಲ್ಲಿ ಕಾಲೇಜು ಕಟ್ಟಿಸಲು ಮೂರುಸಾವಿರ ಮಠದ ಜಾಗೇ ಬೇಡ ಎಂದರು.

ಈಗಾಗಲೇ ಹುಬ್ಬಳ್ಳಿಯಲ್ಲಿ ಕಾಡಸಿದ್ದೇಶ್ವರ ಕಾಲೇಜು ಹಾಗೂ ಗಂಗಾಧರ ಕಾಲೇಜಿಗೆ ಮೂರುಸಾವಿರ ಮಠ ಜಾಗೆ ಕೊಟ್ಟಿದೆ ಎಲ್ಲ ಕಾಲೇಜಿಗೂ ಜಾಗೆ ಕೊಡುವಷ್ಟು ಆರ್ಥಿಕವಾಗಿ ಸದೃಡವಾಗಿಲ್ಲ.ಒಂದು ವೇಳೆ ಮೆಡಿಕಲ್ ಕಾಲೇಜು ಕಟ್ಟಲೇ ಬೇಕು ಎಂದಾದರೆ ಮೂರುಸಾವಿರಮಠದ ಆಡಳಿತದ ಅಡಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಿ ಅದಕ್ಕೆ ನಮ್ಮ ಸ್ವಾಗತವಿದೆ ಎಂದು ಅವರು ಹೇಳಿದರು.

ಹಿಂದೂ ಮುಸ್ಲಿಂ ಗಲಾಟೆಯನ್ನು ಹತ್ತಿಕ್ಕುವ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿರುವ ಮೂರುಸಾವಿರ ಮಠ ಮಾಡಿದೆ.ಮೂರುಸಾವಿರ ಮಠವು ದಾನ‌ ಮಾಡುವಷ್ಟು ಆರ್ಥಿಕವಾಗಿ ಮುಂದಿಲ್ಲ.ಅಲ್ಲದೇ ಆಸ್ತಿಯನ್ನು ಮಾರಿ ಮೂರುಸಾವಿರ ಮಠದ ಅಭಿವೃದ್ಧಿ ಮಾಡಬೇಕು ಎಂಬುವಂತ ಪರಿಸ್ಥಿತಿ ಇದ್ದರೇ ನಾನು ನೂರು ಹಳ್ಳಿಗಳ ಬಿಕ್ಷೆ ಬೇಡಿ ತಂದು ಮಠಕ್ಕೆ ನೀಡುತ್ತೇನೆ.ಆದರೇ ಯಾವುದೇ ಕಾರಣಕ್ಕೂ ಮಠದ ಆಸ್ತಿಯನ್ನು ಹಾಳಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ಈಗಾಗಲೇ ಸಾಕಷ್ಟು ಕೈಗಳು ಮೂರುಸಾವಿರ ಮಠದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿವೆ ಕೆಲವರು ಈಗಾಗಲೇ ಮೂರುಸಾವಿರ ಮಠದ ಆಸ್ತಿಯನ್ನು ಬರೆಸಿಕೊಂಡಿದ್ದಾರೆ.ಮುಂಬರುವ ದಿನಗಳಲ್ಲಿ ದಾಖಲೆ ಸಮೇತ ಯಾರು ಆಸ್ತಿಯನ್ನು ತಿಂದಿದ್ದಾರೆ ಎಂದು ತಿಳಿಸುತ್ತೇನೆ ಎಂದ ಅವರು,ಕೆಎಲ್ಇ ಸಂಸ್ಥೆಯವರು ಕೂಡಲೇ ಈ ನಿರ್ಧಾರವನ್ನು ಕೈ ಬಿಟ್ಟರೇ ಸಂಸ್ಥೆಗೂ ಒಳ್ಳೆಯದು ಮೂರುಸಾವಿರ ಮಠಕ್ಕೂ ಒಳ್ಳೆಯದು ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೇ ಮುಂಬರುವ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ಗಂಟೆ ಬಾರಿಸಿದರು.

Edited By : Nagesh Gaonkar
Kshetra Samachara

Kshetra Samachara

23/12/2020 06:46 pm

Cinque Terre

53.84 K

Cinque Terre

3

ಸಂಬಂಧಿತ ಸುದ್ದಿ