ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿ.ಜೆ.ಪಿ ಸರ್ಕಾರದ ಎನ್.ಐ.ಎ ದುರ್ಬಳಕೆ ವಿರುದ್ಧ ಎಸ್.ಡಿ.ಪಿ.ಐ ಕಿಡಿ

ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಎನ್.ಐ.ಎ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಜನಪರ ಹೋರಾಟಗಾರರ ವಿರುದ್ಧ ನಿರಂತರ ದುರ್ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಎಸ್.ಡಿ.ಪಿ.ಐ ಹುಬ್ಬಳ್ಳಿ ಶಹರದ ಸಂಗೊಳ್ಳಿ ರಾಯಣ್ಣ ವೃತ್ತ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಿದೆ.

ಬೆಂಗಳೂರಿನ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ಕಳೆದ ಆಗಸ್ಟ್ ತಿಂಗಳನಲ್ಲಿ ನಡೆದ ಪ್ರವಾದಿ ನಿಂದನೆ ವಿರುದ್ಧ ಹಿಂಸಾಚಾರ ನಡೆದಿತ್ತು, ಈ ಹಿಂಸಾಚಾರ ರಾಜಕೀಯ ನಂಟಿನ ಭಾಗವಾಗಿರುತ್ತದೆ. ಇದರ ತನಿಖೆಯನ್ನು ಮೊದಲು ರಾಜ್ಯ ಪೊಲೀಸ್ ನಂತರದಲ್ಲಿ ರಾಷ್ಟ್ರೀಯ ತನಿಖಾದಳವು ಸಹ ತನಿಖೆ ಮಾಡುತ್ತಿವೆ. ಈಗಾಗಲೇ ಸಾವಿರಾರು ಜನರ ವಿಚಾರಣೆಯನ್ನು ನಡೆಸಲಾಗಿದೆ. ಎಸ್.ಡಿ.ಪಿ.ಐ ಕಾರ್ಯಕರ್ತರು ನಿರಂತರವಾಗಿ ಎನ್.ಐ.ಎ ಕಛೇರಿಗೆ ಭೇಟಿ ನೀಡಿ ತನಿಖಾಧಿಕಾರಿಗಳಿಗೆ ವಿಚಾರಣೆಯಲ್ಲಿ ಸಂಪೂರ್ಣ ಸಹಕಾರ ನೀಡಿರುತ್ತಾರೆ. ಕೆಲವರ ಮೊಬೈಲ್ ಪರಿಶೀಲನೆ ನಡೆಸಿಯೂ, ಯಾವುದೇ ಸಾಕ್ಷಿಗಳು ಸಿಕ್ಕಿರುವುದಿಲ್ಲ. ಪಕ್ಷದ ಕೆಲವು ಕಛೇರಿಗಳಿಗೂ ದಾಳಿ ಮಾಡಲಾಗಿತ್ತು. ಎಲ್ಲಾ ಆಯಾಮಗಳಲ್ಲೂ ಈ ಗಲಭೆಯಲ್ಲಿ ಎಸ್.ಡಿ.ಪಿ.ಐ ನ ಯಾವುದೇ ಪಾತ್ರವಿಲ್ಲ ಎಂದು ಕಂಡು ಬಂದಿರುತ್ತದೆ. ಅದಾಗಿಯೂ ಸಹಾ ಕೇಂದ್ರ ಬಿ.ಜೆ.ಪಿ ನಾಯಕರ ನಿರ್ದೇಶನ ಮೇರೆಗೆ ಎಸ್.ಡಿ.ಪಿ.ಐ ಪಕ್ಷವನ್ನು ಸಿಲುಕಿಸುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಗುಡುಗಿದರು.

Edited By : Nagesh Gaonkar
Kshetra Samachara

Kshetra Samachara

23/12/2020 12:26 pm

Cinque Terre

23.3 K

Cinque Terre

0

ಸಂಬಂಧಿತ ಸುದ್ದಿ