ಕಲಘಟಗಿ:ಗಂಜಿಗಟ್ಟಿ ಗ್ರಾಮ ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿ ಗೆ ಯುವ ಉತ್ಸಾಹಿ ನ್ಯಾಯವಾದಿ ನಿಂಗಪ್ಪ ಬಸಪ್ಪ ಮುತ್ತಣ್ಣವರ ಪಣತೊಟ್ಟಿದ್ದು ,ಗ್ರಾಮಸ್ಥರ ಸಹಕಾರವೇ ತಮ್ಮ ಗೆಲುವಿಗೆ ರಹದಾರಿ ಎಂದು ನಂಬಿ ಗಂಜಿಗಟ್ಟಿ ಗ್ರಾಮ ಪಂಚಾಯತಿ ಎರಡನೇ ವಾರ್ಡದಿಂದ ಬ ವರ್ಗದಿಂದ ಚುನಾವಣೆಗೆ ಸ್ಪರ್ಧಿ ಸಿ ಆಯ್ಕೆ ಬಯಸಿದ್ದಾರೆ.
ಸಾಮಾಜಿಕ ಕಳಕಳಿಯ ನಿಂಗಪ್ಪ ಮುತ್ತಣ್ಣವರ ಗಂಜಿಗಟ್ಟಿ ಗ್ರಾಮದ ಅಭಿವೃದ್ಧಿಗೆ ಸದಾ ಚಿಂತಿಸುವ ಸಹೃದಯಿಯಾಗಿದ್ದು,ಗ್ರಾಮದ ಹುಡೆದಕೆರೆ ನೀರಿನ ಟ್ಯಾಂಕ್ ರಿಪೇರಿಗೆ ಹೋರಾಟ,ಹೊಸ ಟ್ಯಾಂಕ್ ಸ್ಥಾಪನೆ,ಗ್ರಾಮದಲ್ಲಿ ಒಂದೆ ಬ್ಯಾಂಕ್ ಇದ್ದು ಅಲ್ಲಿ ರೈತರಿಗೆ ಸಾಲ ಮುಂತಾದ ಸೌಲಭ್ಯಪಡೆಯಲು ಮತ್ತೊಂದು ರಾಷ್ಟ್ರೀಯ ಬ್ಯಾಂಕ್ ಬೇಕು ಎಂಬ ಪ್ರಯತ್ನದಲ್ಲಿ ಇದ್ದು ಜನಾನೂರಾಗಿ ಕೆಲಸಕ್ಕೆ ಮುಂದಾಗಿ ಗ್ರಾಮಸ್ಥರಿಂದ ಬೇಷ ಎನ್ನಿಸಿಕೊಂಡ ಛಲಗಾರರಾಗಿದ್ದಾರೆ.
ವಾರ್ಡಿನ ಬಡವರಿಗೆ ಬಿಪಿಎಲ್ ಪಡಿತರ ಕಾರ್ಡ್,ಗ್ಯಾಸ್ ಸಿಲಿಂಡರ್ ಫಲಾನುಭವಿಗಳ ಮನೆಗೆ ತಲುಪಿಸುವ ಸದುದ್ದೇಶದಿಂದ ಗ್ರಾ ಪಂ ಚುನಾವಣೆಯ ಹುರಿಯಾಳಾಗಿದ್ದಾರೆ.
ನಿಂಗಪ್ಪ ಮುತ್ತಣ್ಣವರ ಗ್ರಾಮದ ಅಭಿವೃದ್ಧಿಯ ಕನಸು ಹಾಗೂ ಸಂಕಲ್ಪ ಗ್ರಾಮದಲ್ಲಿ ಆಯಕಟ್ಟಿನ ಜಾಗೆಗಳಲ್ಲಿ,ಸರ್ಕಲ್ ಗಳಲ್ಲಿ ಹೈಮಾಸ್ಕ್ ವಿದ್ಯುತ್ ದೀಪ ಹಾಗೂ ಮಿನಿ ನೀರಿನ ಟ್ಯಾಂಕ್ ಅಳ್ವಡಿಸುವ ಗುರಿ ಹಾಗೂ ನಿರ್ಮಾಣ ಹಂತದ ಗರಡಿ ಮನೆ ಪೂರ್ಣ ಮಾಡಿ ಯುವಕರಿಗೆ ಸುಸಜ್ಜಿತ ವ್ಯಾಯಾಮ ಶಾಲೆ ಸ್ಥಾಪನೆ,ಪ್ರತಿ ಓಣಿಯಲ್ಲಿ ಪುಟ್ ಪಾತ್ ,ಕಸ ವಿಲೇವಾರಿಗೆ ತೊಟ್ಟಿ ನಿರ್ಮಾಣದಂತಹ
ಅಭಿವೃದ್ಧಿಯ ಕನಸು ಹೊಂದಿದ್ದಾರೆ ಹಾಗೂ ಗ್ರಾಮ ಪಂಚಾಯತಿಯಲ್ಲಿಯೇ ಆಧಾರ ನೋಂದಣಿ,ಪಹಣಿ ಪತ್ರ ಸಿಗುವಂತೆ ಮಾಡುವ ಸಂಕಲ್ಪ ಇವರದ್ದಾಗಿದೆ.
ಬಡವರಿಗೆ ಕೂಲಿ ಕೆಲಸ ಸಿಗಬೇಕು ಹಾಗೂ ಪ್ರತಿಮನೆಗೆ ಇಂಗುಗುಂಡಿ,ದನದ ಕೊಟ್ಟಿಗೆ,ಬದು ನಿರ್ಮಾಣ,ನೀರು ಕಾಲುವೆ ನಿರ್ಮಿಸಲು ಪ್ರೋತ್ಸಾಹಿಸಿ,ಅದರ ಲಾಭ ದೊರಕುಂವಂತೆ ಮಾಡುವುದು,ಅಲ್ಲದೇ ಗ್ರಾಮದ ಅಭಿವೃದ್ಧಿಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಶೇಷ ಅನುದಾನ ತರಲು ನಿರಂತರವಾಗಿ ಶ್ರಮಿಸುವುದು,ಪಂಚಾಯತಿಯಲ್ಲಿ ಅವ್ಯವಹಾರ,ಲೋಪ ದೋಷಗಳಾಗದಂತೆ ಕಾಯಾ,ವಾಚಾ, ಮನಸಾ ವಾಗ್ದಾನವನ್ನು ಅಭ್ಯರ್ಥಿ ನಿಂಗಪ್ಪ ಮುತ್ತಣ್ಣವರ ಗ್ರಾಮಸ್ಥರಿಗೆ ನೀಡಿದ್ದಾರೆ.
ಪ್ರಿಯ ! ಮತದಾರ ಬಾಂಧವರೆ ! ಗಂಜಿಗಟ್ಟಿ ಗ್ರಾ ಪಂಗೆ ೨೨-೧೨-೨೦೨೦ ರಂದು ನಡೆಯುವ ಚುನಾವಣೆಯಲ್ಲಿ ಬ ವರ್ಗ ದಿಂದ ಸ್ಪರ್ಧಿಸಿರುವ ನಮ್ಮ ಗುರ್ತಾದ ಬ್ಯಾಟರಿ ( ಟಾರ್ಚ್ )ಗೆ ನಿಮ್ಮ ಅತ್ಯಮೂಲ್ಯವಾದ ಮತವನ್ನು ಕೊಟ್ಟು ಪ್ರಚಂಡ ಬಹುಮತದಿಂದ ಆರಿಸಿತರಲು ಕಳಕಳಿಯಿಂದ ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ ಅಭ್ಯರ್ಥಿ ನಿಂಗಪ್ಪ ಮುತ್ತಣ್ಣವರ.
Kshetra Samachara
20/12/2020 06:08 pm