ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಎಮ್ ಇಬ್ರಾಹಿಂ ಬಿಜೆಪಿ ಸೇರುವುದಿಲ್ಲ, ಜನತಾದಳ ಸೇರಬಹುದು! ಹೊರಟ್ಟಿ

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಭೇಟಿ ಬಗ್ಗೆ ಅನ್ಯತೆ ಕಲ್ಪಿಸುವುದು ಬೇಡಾ, ಹುಬ್ಬಳ್ಳಿಗೆ ಬಂದಗೊಮ್ಮೆ ಭೇಟಿ ಆಗುತ್ತಲೇ ಇರುತ್ತೆವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಕಾಂಗ್ರೆಸ್ ಮುಖಂಡ ಸೀಎಮ್ ಇಬ್ರಾಹಿಂ ಭೇಟಿ ನಂತರ ಮಾತನಾಡಿದ ಅವರು, ಸಿಎಮ್ ಇಬ್ರಾಹಿಂ ಬಿಜೆಪಿ ಸೇರೊಲ್ಲ, ಅದು ಉಹಾಪೊಹ,ಅವರು ಜನತಾದಳದಲ್ಲಿ ಮೊದಲಿನಿಂದ ಇದ್ದವರು,ಜನತಾದಳಕ್ಕೆ ಹೋಗಬಹುದು, ಆದರೆ, ಬಿಜೆಪಿಗೆ ಹೋಗುವುದಿಲ್ಲ,

ಇನ್ನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುತ್ತನೆ ಎಂಬ ಹೇಳಿಕೆಗೆ ನಾ‌ನು ಬದ್ದ. ಸಾಧಕ, ಬಾದಕ ಗಳ ಬಗ್ಗೆ ವಿಚಾರ ಮಾಡುತ್ತಾರೆ. ಒಳ್ಳೆಯದು, ಕೆಟ್ಟದ್ದು ವಿಚಾರ ಮಾಡುವವರು ಹೀಗಾಗಿ ಅವರು ಹೇಳಿದ್ದಾರೆ ಎಂದರು.

ಸಿದ್ದರಾಮಯ್ಯ, ಕುಮಾರಸ್ವಾಮಿ ವಾಗ್ವಾದ ವಿಚಾರಕ್ಕೆ ಮಾತನಾಡಿದ ಅವರು ಅದು ಲವ್ ಮ್ಯಾರೇಜ್ ಆಗಿತ್ತು ಇವಾಗ ಮುರಿದು ಬಿದ್ದಿದೆ, ಲವ್ ಮ್ಯಾರೇಜ್ ಸಕ್ಸಸ್ ಆಗುವುದಿಲ್ಲ.

ಆದ್ದರಿಂದ ಇದ್ದಾಗಿಂದ ಸಂಬಂಧ‌ ಬಗ್ಗೆ ಇವಾಗ ಮಾತನಾಡುವ ಅವಶ್ಯಕತೆ ಇಲ್ಲ, ಎಂದರು. ಇನ್ನೂ ಗೋ ಹತ್ಯೆ ನಿಷೇದ ಕಾಯ್ದೆ ಒಳ್ಳೆಯದು ಆದ್ರೆ ಎಲ್ಲ ವ್ಯವಸ್ಥೆ ಮಾಡಿ ಅಂತಹ ಕಾಯ್ದೆಗಳನ್ನು ಜಾರಿ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು.

Edited By : Manjunath H D
Kshetra Samachara

Kshetra Samachara

19/12/2020 04:13 pm

Cinque Terre

44.8 K

Cinque Terre

2

ಸಂಬಂಧಿತ ಸುದ್ದಿ