ಕಲಘಟಗಿ: ಸೂಳಿಕಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಮಾದರಿಯಾಗಬೇಕು ಎಂಬ ಸದುದ್ದೇಶದಿಂದ ಜನಸೇವೆಗೆ ಮುಂದಾದ ಶ್ರೀ ಪರಶುರಾಮ ಎತ್ತಿನಗುಡ್ಡ ಎಂಎ., ಬಿಎಡ್ ಪದವೀಧರರಾಗಿದ್ದು, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಗ್ರಾಮದ ಅಭಿವೃದ್ಧಿ ಬಯಸಿ ಈ ಬಾರಿ ಸೂಳಿಕಟ್ಟಿ ಹಾಗೂ ಸಚ್ಚಿದಾನಂದ ನಗರದ ಗ್ರಾಪಂ ಚುನಾವಣೆಯ ಸಾಮಾನ್ಯ ಕ್ಷೇತ್ರದಿಂದ ಹೆಲಿಕಾಪ್ಟರ್ ಚಿಹ್ನೆ ಪಡೆದು ಸ್ಪರ್ಧಿಸಿದ್ದಾರೆ.
ಗ್ರಾಮದ ಪ್ರತಿಯೊಬ್ಬರಿಗೂ ಚಿರಪರಿಚಿತರಾಗಿ ದೀನ ದಲಿತರಿಗೆ ಹಾಗೂ ಮಹಿಳೆಯರಿಗೆ, ಹಿರಿಯರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳ ಕುರಿತು ಯಾವುದೇ ಫಲಾಪೇಕ್ಷೆ ಇಲ್ಲದೆ ತಿಳಿವಳಿಕೆ ಮೂಡಿಸಿ ಜನರನ್ನು ಸಮಾಜಮುಖಿ ಕಾರ್ಯಕ್ಕೆ ಹುರಿದುಂಬಿಸುವ ಛಲಗಾರರಾಗಿದ್ದಾರೆ ಶ್ರೀ ಪರಶುರಾಮ ಎತ್ತಿನಗುಡ್ಡ.
ಸೂಳಿಕಟ್ಟಿ ಹಾಗೂ ಸಚ್ಚಿದಾನಂದ ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗ್ರಾಮಸ್ಥರ ಸಹಕಾರದಿಂದ ಕಳೆದ 15 ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದಾರೆ.
ಸೂಳಿಕಟ್ಟಿ ಗ್ರಾಮದ ಅಭಿವೃದ್ಧಿ ಕನಸು ಕಂಡ ಶ್ರೀ ಪರಶುರಾಮ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ, ರಸ್ತೆ, ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರು, ಬೀದಿ ದೀಪ, ತಟ್ಟಿ ಹಳ್ಳಕ್ಕೆ ಬಾಂಧಾರ ನಿರ್ಮಿಸಿ ನೀರಾವರಿ ಸೌಲಭ್ಯವನ್ನು ಗ್ರಾಮಸ್ಥರಿಗೆ ಒದಗಿಸುವ ಕನಸು ಕಂಡು ಗೆಲುವಿನ ನಗೆ ಬೀರಲು ಮುಂದಾಗಿದ್ದಾರೆ.
Kshetra Samachara
19/12/2020 11:40 am