ಕುಂದಗೋಳ : ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಹಳ್ಳಿಗಳಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು ಸದ್ಯ ನಾಮಿನೇಷನ್ ಪ್ರಕ್ರಿಯೆ ಮುಗಿಸಿ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಬಿರುಸಿನ ಪ್ರಚಾರದ ಅಲೆಯಲ್ಲಿ ನಿರತರಾಗಿದ್ದಾರೆ.
ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯಿತಿಗಳ ಗ್ರಾಮಗಳ ವಾರ್ಡ್ ವಾರು ಅಭ್ಯರ್ಥಿಗಳು ಮತದಾರರ ಮನೆ ಬಾಗಿಲಿಗೆ ಧಾವಿಸಿ ಕೈ ಮುಗಿಯುವ ಪ್ರಕ್ರಿಯೆ ಸಾಮಾನ್ಯವಾಗಿದ್ದರೆ. ಈಗಾಗಲೇ ಹೊಸ ಅಭ್ಯರ್ಥಿಗಳ ಗ್ರಾಮಕ್ಕೆ ನೀಡಬಹುದಾದ ಹೊಸ ಅಭಿವೃದ್ಧಿ ಪ್ರಣಾಳಿಕೆಯನ್ನು ಜನರ ಮುಂದಿಟ್ಟರೇ ಹಳಬರು ತಾವು ಮಾಡಿರುವ ಪ್ರಗತಿ ಕೆಲಸಗಳನ್ನೇ ಅಸ್ತ್ರವಾಗಿಸಿದ್ದಾರೆ.
ಆದರೂ ಕೆಲ ಗ್ರಾಮಗಳ ಹೊರವಲಯದಲ್ಲಿ ಬಾಡೂಟ, ಗುಂಡು, ತುಂಡುಗಳು ಪಾರ್ಟಿ ಕಂಡು ಬಂದರೂ ಅವು ರಾಜಕೀಯ ಲೇಪನ ಪಡೆಯದೇ ಮದುವೆ, ಬರ್ತಡೇ, ಹೊಸ ವಾಹನ ಖರೀದಿಯ ಟ್ರೀಟ್ ಹೆಸರಿನಲ್ಲೇ ಗಪ್ ಚುಪ್ ಆಗಿದ್ದು, ಯುವಕರೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಗ್ರಾಪಂ ನಾಮಿನೇಷನ್ ಮಾಡಿರುವುದು ಹಿರಿಯರಿಗೆ ವರ್ಚಸ್ಸಿನ ಪ್ರಶ್ನೆ ಕಾಡುತ್ತಲಿದೆ.
ಪಕ್ಷವಾರು ಗ್ರಾಮ ಪಂಚಾಯಿತಿ ಚುನಾವಣೆ ಲೆಕ್ಕಿಸುವುದಾದರೇ, ಬಿಜೆಪಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ಧಿ ಮಂತ್ರ ಜಪಿಸಿದರೆ, ಕಾಂಗ್ರೆಸ್ ಕೊರೊನಾ ವ್ಯಾಕ್ಸಿನ್, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಬೆಳೆ ಪರಿಹಾರ, ಅತಿವೃಷ್ಟಿ ಹಾನಿ, ಆಶ್ರಯ ಮನೆಗಳ ಹಂಚಿಕೆ ಲೋಪ ದೋಷ, ವಿಧವಾ ವೇತನ, ವೃದ್ಯಾಪ್ಯ ವೇತನ ಮಾತೆತ್ತಿ ಮತ್ತು ವೃದ್ಧರು, ಅಂಗವಿಕಲರು, ರೈತರು ಹಾಗೂ ಮಹಿಳೆಯರ ಮುಂಗೈ ಹಿಡಿದು ಅವಕಾಶ ಕೇಳುತ್ತಿದ್ದಾರೆ.
ಜೆಡಿಎಸ್ ಗ್ರಾಮ ಪಂಚಾಯಿತಿ ಸಮರದಲ್ಲಿ ಬೆರಳಿಣಿಕೆಯಷ್ಟೇ ಗ್ರಾಮಗಳಲ್ಲಿ ಸದ್ದು ಮಾಡುತ್ತಿದ್ದು, ಅಭ್ಯರ್ಥಿಗಳು ಯಾವುದೇ ಪಕ್ಷದ ಮುಖವಾಡ ಧರಿಸಿದೆ ಇದ್ದರೂ ಈ ಹಿಂದೆ ಗುರುತಿಸಿಕೊಂಡ ಪಟಗಳು ಆಯಾ ಗ್ರಾಮಸ್ಥರ ಮನದಲ್ಲಿವೆ. ಈ ಪಂಚಾಯಿತಿ ಚುನಾವಣೆಗೆ ಗುತ್ತಿಗೆದಾರರ ಸ್ಪರ್ದಿಸುವಂತಿಲ್ಲ ಎಂದು ಚುನಾವಣಾ ಆಯೋಗವೇ ಹೇಳಿದ್ದರು, ಗುತ್ತಿಗೆದಾರರ ಕುಟುಂಬದವರು ಪರೋಕ್ಷವಾಗಿ ನಾಮಿನೇಷನ್ ಮಾಡಿರುವುದು ಕಂಡು ಬರುತ್ತಿದೆ.
ಈಗಾಗಲೇ ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯಿತಿಗಳ 346 ಸ್ಥಾನಗಳಿಗೆ ಬರೋಬ್ಬರಿ 1301 ನಾಮಪತ್ರ ಸಲ್ಲಿಕೆ ಆಗಿದ್ದು ಇದರಲ್ಲಿ ಯುವಕರೇ ಅತಿಹೆಚ್ಚು ಈ ಸಾರಿ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇಂದು ನಡೆಯುವ ಸ್ಪುಟ್ನಿ ಬಳಿಕ ಅದೆಷ್ಟು ಗಟ್ಟಿ ಕಾಳುಗಳು ಗ್ರಾಪಂ ಗೆ ಪೈಟ್ ಮಾಡಲಿವೆ ಕಾದು ನೋಡಬೇಕು. ಒಟ್ಟಾರೆ ಗ್ರಾಪ ಚುನಾವಣೆ ಹಿಂದಿನ ದಿನ ಹಣ ಹೆಂಡದ ಕಸರತ್ತಿನ ಮಾತು ಕೇಳಿ ಬರುತ್ತಿದ್ದು ಇದಕ್ಕೆ ಮತದಾರರೇ ಸಾಕ್ಷ್ಯ ನೀಡಬೇಕಿದೆ.
Kshetra Samachara
17/12/2020 08:26 pm