ಕಲಘಟಗಿ:ತಾಲೂಕಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ ಹನ್ನೆರಡು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಬುಧವಾರ ನೌಕರರ ಭವನದಲ್ಲಿ ತುರುಸಿನಿಂದ ಜರುಗಿದ ಚುನಾವಣೆಯ ಮತ ಎಣಿಕೆ ತಡರಾತ್ರಿವರೆಗೆ ನಡೆದು ಫಲಿತಾಂಶ ಪ್ರಕಟವಾಗಿದೆ.
ಸಾಮಾನ್ಯ ಮೀಸಲಾತಿಯಲ್ಲಿ ಎಸ್ ಎ ಚಿಕನರ್ತಿ 400,ಜಗದೀಶ್ ವಿರಕ್ತಿಮಠ 387,ರಾಜು ಲಮಾಣಿ 341,ಆರ್ ಎಂ ಹೂಲ್ತಿಕೋಟೆ 337,
ಚೇತನ ಎನ್ 297,ಎಂ ಎ ಅಂಚಟಗೇರಿ 296, ಬಸವರಾಜ ಉಳ್ಳಾಗಡ್ಡಿ 282,ಉಮೇಶ ಬೇರೂಡಗಿ 253 ಹಾಗೂ ಮಹಿಳಾ ಮೀಸಲು ಸ್ಥಾನಗಳಲ್ಲಿ ಶ್ರೀಮತಿ ವಿಜಯಲಕ್ಷ್ಮಿ ದೇಶಪಾಂಡೆ 351,ಶ್ರೀಮತಿ ರತ್ನ ರಜಪೂತ 319,ಶ್ರೀಮತಿ ಸೀತಮ್ಮ ಚಿನ್ನಪ್ಪನವರ 289,ಶ್ರೀಮತಿ ಕುಸುಮಾ ದೊಡವಾಡ 231 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಬುಧವಾರ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
Kshetra Samachara
16/12/2020 03:32 pm