ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯೋಗ್ಯರು ಆಯ್ಕೆ ಆಗಬೇಕು, ಯೋಗ್ಯ ವ್ಯಕ್ತಿಗಳು ಆಯ್ಕೆ ಮಾಡಬೇಕೆಂಬ ಆಶಯದೊಂದಿಗೆ ಈ ಹಿಂದೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೆ. ಆದರೆ ಈಗ ಕೋವಿಡ್ ಇರುವುರಿಂದ ಹೋಗಲಿಕ್ಕೆ ಆಗಲಿಲ್ಲ. ಈ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಗಳು ಆಯ್ಕೆ ಆಗಲಿ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಗೆ ಮತ ಹಾಕಿ ಅಧಿಕಾರಕ್ಕೆ ತರಬೇಕು. ಜನರಿಗೆ ಸ್ಪಂದಿಸಬೇಕು. ಕೈ ಬಾಯಿ ಶುದ್ಧವಿರುವ ಸೂಕ್ತ ಯೋಗ್ಯವಾದ ವ್ಯಕ್ತಿಗೆ ಅವಕಾಶ ನೀಡಬೇಕು. ಮತದಾರರು ಸಹಿತ ಒಳ್ಳೆಯ ನಡುವಳಿಕೆ ಆತನ ಹಿಂದಿನ ಚರಿತ್ರೆ, ಗುಣ ಲಕ್ಷಣಗಳು, ಎಲ್ಲಾ ತಿಳಿದು ಅಧಿಕಾರ ನೀಡಬೇಕು. ಯೋಗ್ಯರು ಚುನಾವಣೆಯಲ್ಲಿ ಆಯ್ಕೆ ಆದರೆ ಆಯಾ ಗ್ರಾಮದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಲ್ಲದೇ ಮತದಾರರು ಸಹಿತ ನೋಡಿ ತಿಳಿದುಕೊಂಡು ಮತ ನೀಡಬೇಕು ಎಂದರು.
Kshetra Samachara
12/12/2020 04:09 pm