ಧಾರವಾಡ: ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ಭಾರತ ಬಂದ್ ಬೆಂಬಲಾರ್ಥವಾಗಿ ನಡೆಯುತ್ತಿದ್ದ ಧರಣಿ ವೇಳೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾತನಾಡುವ ಭರಾಟೆಯಲ್ಲಿ, ಅಂಬಾನಿ ಸಾಕಿದ ನಾಯಿ ಈ ದೇಶದ ಪ್ರಧಾನಮಂತ್ರಿ ಎಂದು ಮೋದಿ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ. ಅದೇ ರೀತಿ ಅಮಿತ್ ಶಾ ಕೂಡ ಅಂಬಾನಿ ಸಾಕಿದ ನಾಯಿ ಎಂಬ ಹೇಳಿಕೆ ನೀಡಿದ್ದಾರೆ. ಅಂಬಾನಿ ಕೂಡ ಮೋದಿ ಸಾಕಿದ ನಾಯಿ ಎಂದು ಹೇಳಿಕೆ ಕೊಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
Kshetra Samachara
08/12/2020 04:56 pm