ಹುಬ್ಬಳ್ಳಿ: ಭಾರತ್ ಬಂದ್ ಹಿನ್ನೆಲೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲೇ ಇಡ್ಲಿ ಚಟ್ನಿ ಸವಿದ ಪ್ರತಿಭಟನಾಕಾರರು
ಉಪಹಾರ ಸೇವಿಸುತ್ತಾ ಕೇಂದ್ರದ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದರು.
ಇಡ್ಲಿ ಚಟ್ನಿ ಆಚ್ಛಾ ಹೈ, ಮೋದಿ ಸರ್ಕಾರ್ ಲುಚ್ಛಾ ಹೈ ಎಂದು ರೈತರ ಘೋಷಣೆ ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಬೆಳಿಗ್ಗೆಯಿಂದಲೇ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು ಚೆನ್ನಮ್ಮ ವೃತ್ತದಲ್ಲಿ ಉಪಹಾರ ಸವಿದು ಪ್ರತಿಭಟನೆಗೆ ಮುಂದಾದರು.
Kshetra Samachara
08/12/2020 11:07 am