ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಭಾರತ ಬಂದ್ ಗೆ ಹಲವು ಬೆಂಬಲ ಸೂಚಿಸಿದ ಎಐಕೆಎಸ್ಸಿಸಿ

ಧಾರವಾಡ : ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಡಿ.8 ರಂದು ರೈತ ಸಂಘಗಳು ಕರೆ ನೀಡಿರುವ ಭಾರತ ಬಂದ್ ಗೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಬೆಂಬಲ ಸೂಚಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖಂಡರು,ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕಾರ್ಪೋರೇಟ್‌ ಪರ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ಹಿಂಪಡೆಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟು , ದೆಹಲಿಯಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿರುವ ರೈತರ ಮೇಲೆ ಹಲ್ಲೆ ಮಾಡಿಸಿದ ಕೇಂದ್ರ ಸರ್ಕಾರದ ನಡೆಯನ್ನು ಬಲವಾಗಿ ಖಂಡಿಸುತ್ತೇವೆ.ದೇಶದ ರೈತರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಭಾರತ ಬಂದ್ ಗೆ ಸ್ವಯಂ ಪ್ರೇರಿತರಾಗಿ ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಿಂದ ಮನವಿ ಮಾಡಿಕೊಂಡರು.

ಧಾರವಾಡ ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇವೆ ಈ ಸ್ವಯಂಪ್ರೇರಿತ ಬಂದ್ ಗೆ ಬೆಂಬಲಿಸಿ,ಎಪಿಎಂಸಿ ವರ್ತಕರ ಹಾಗೂ ದಲಾಲರ ಸಂಘಟನೆ,ದಲಿತ ಸಂಘರ್ಷ ಸಮಿತಿಗಳು,ಆಟೋ ಚಾಲಕರ ಸಂಘ,ಕಾರ್ಮಿಕ ಸಂಘಟನೆಗಳು, ಲಿಡ್ಕರ್ ಸಂಘಟನೆಗಳು, ಸೇರಿದಂತೆ ಇನ್ನೂ ಮುಂತಾದ ಜನಪರ ಸಂಘಟನೆಗಳು ಭಾಗವಹಿಸುತ್ತವೆ ಎಂದು ತಿಳಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

07/12/2020 02:57 pm

Cinque Terre

20.23 K

Cinque Terre

0

ಸಂಬಂಧಿತ ಸುದ್ದಿ