ಧಾರವಾಡ: ಧಾರವಾಡದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ವಕೀಲರೊಬ್ಬರು ಕೇಳಿದ ಪ್ರಶ್ನೆಗೆ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರು ನಾನು ಬಿಜೆಪಿ ಕಾರ್ಯಕರ್ತನಲ್ಲ ಎಂದು ಉತ್ತರಿಸಿದ ಪ್ರಸಂಗ ಜರುಗಿತು.
ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕುರಿತಾಗಿ ಸೂಲಿಬೆಲೆ ಅವರು ಮಾತನಾಡಿದ ನಂತರ ಸಭೆಯಲ್ಲಿದ್ದ ವಕೀಲರಾದ ಮಹಾದೇವ ದೊಡಮನಿ ಅವರು, ಬಿಜೆಪಿಯ ಕೆಲ ನಾಯಕರು ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಿದ್ದಾರೆ ಅದರ ಬಗ್ಗೆ ನೀವು ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಚಕ್ರವರ್ತಿ ಈ ಪ್ರಶ್ನೆಗೆ ಉತ್ತರವನ್ನು ನೀವು ಬಿಜೆಪಿಯವರ ಬಳಿಯೇ ಕೇಳಬೇಕು. ನಾನು ಬಿಜೆಪಿ ಕಾರ್ಯಕರ್ತನಲ್ಲ. ಸಂವಿಧಾನ ಎಂಬುದು ಒಂದು ಸ್ಮೃತಿ ಅದರ ಬಗ್ಗೆ ಯಾರೂ ಹಾಗೆ ಮಾತನಾಡಬಾರದು. ಬಿಜೆಪಿಯವರೂ ಮಾತನಾಡಬಾರದು, ಕಾಂಗ್ರೆಸ್ ನವರೂ ಮಾತನಾಡಬಾರದು ಎಂದರು.
Kshetra Samachara
01/12/2020 11:13 am