ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಮತಕ್ಷೇತ್ರವನ್ನು ಸರಾಯಿ ಮುಕ್ತವಾಗಿಸಲು ಹೋರಾಟ:ಶಾಸಕ ಸಿ ಎಂ ನಿಂಬಣ್ಣವರ

ಕಲಘಟಗಿ: ತಾಲೂಕು ಡಾ.ನಂಜುಂಡಪ್ಪ ವರದಿಯಂತೆ ಹಿಂದುಳಿದಿದ್ದು,ಇಲ್ಲಿ ಅಕ್ರಮ ಸರಾಯಿ ಹಾವಳಿ ಹೆಚ್ಚಾಗಿದ್ದು,ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಶಾಸಕ ಸಿ ಎಂ ನಿಂಬಣ್ಣವರ ತಿಳಿಸಿದರು.

ಅವರು ನಾಗರೀಕ ಸಂಪರ್ಕ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ,ಮಾತನಾಡಿ,ಸರಾಯಿ ಕುರಿತಾದ ಸರಕಾರದ ಧೋರಣೆಯನ್ನು ವೈಯಕ್ತಿಕವಾಗಿ ವಿರೋಧಿಸುವುದಾಗಿ,ಸರಕಾರ ಪ್ರತಿ ವರ್ಷ ಹೊಸ ಹೊಸ ಸರಾಯಿ ಅಂಗಡಿಗಳನ್ನು ಮಂಜೂರು ಮಾಡುತ್ತಿದ್ದು,ಗ್ರಾಮೀಣ ಬದುಕನ್ನು ಹಾಳು ಮಾಡಲು ಕಾರಣವಾಗುತ್ತಿದೆ.

ಹಳ್ಳಿ ಹಳ್ಳಿಗಳಲ್ಲಿ ನಡೆಯುವ ಅಕ್ರಮ ಸರಾಯಿಗೆ ಕಡಿವಾಣ ಹಾಕದೇ ಹೋದರೆ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಖೇದವ್ಯಕ್ತಪಡಿಸಿದರು.ಮುಂಬರುವ ಸಂಕ್ರಾಂತಿ ಹಬ್ಬದ ವೇಳೆಗೆ ಮಠಮಾನ್ಯಗಳ‌ ಮುಖ್ಯಸ್ಥರು,ಸಂಘ ಸಂಸ್ಥೆಗಳು, ಗಣ್ಯರು, ಯುವಕರೊಂದಿಗೆ ಚರ್ಚಿಸಿ ಕ್ಷೇತ್ರವನ್ನು ಸರಾಯಿ ಮುಕ್ತವಾಗಿಸಲು ಸಮಗ್ರ ಹೋರಾಟಕ್ಕೆ ಚಿಂತನೆ ಮಾಡಿದ್ದಾಗಿ ಹಾಗೂ ಅಬಕಾರಿ ಸಚಿವರೊಂದಿಗೂ ಚರ್ಚೆಮಾಡಿದ್ದು,ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಯಾವುದೇ ರೀತಿಯ ಸರಾಯಿ‌ ಅಂಗಡಿ ಮಂಜೂರಿ ಮಾಡದಂತೆ ವಿನಂತಿಸಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಸಯ್ಯ ಹೆಬ್ಬಳ್ಳಿಮಠ,ಸುನೀಲ ಗಬ್ಬೂರ,ಗಂಗಪ್ಪ ಗೌಳಿ, ಪ್ರಮೋದ ಪಾಲ್ಕರ, ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

30/11/2020 02:13 pm

Cinque Terre

14.63 K

Cinque Terre

8

ಸಂಬಂಧಿತ ಸುದ್ದಿ