ಧಾರವಾಡ : ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ, ಅದಕ್ಕೆ ಐವತ್ತು ಕೋಟಿ ರೂಪಾಯಿ ನೀಡಿರುವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಆದ್ರೆ ಕೇವಲ ಐವತ್ತು ಕೋಟಿಯಿಂದ ಏನೂ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿಂದು ನಡೆದ ಕ್ರಾಂತಿ ಮೋರ್ಚಾ ಮರಾಠಾ, ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮರಾಠಾ ಸಮಾಜ ಬಡವರಿಂದ ಕುಡಿದ ಸಮಾಜವಾಗಿದೆ. ಈಗ ಮುಖ್ಯಂಮತ್ರಿಗಳು ಮರಾಠಾ ಅಭಿವೃದ್ಧಿ ಪ್ರಧಿಕಾರಕ್ಕೆ ಕೇವಲ ಐವತ್ತು ಕೋಟಿ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ.
ಆದ್ರೆ ಕರ್ನಾಟಕದಲ್ಲಿ ನಾವು ನಾಲ್ಕರಿಂದ ಐದು ಪರ್ಸೆಂಟ್ ಜನ ಇದ್ದೇವೆ, ಹಾಗಾಗಿ ಕೇವಲ ಐವತ್ತು ಕೋಟಿಯಿಂದ ಏನು ಮಾಡಲು ಸಾಧ್ಯವಿದೆ.ಅಲ್ಲದೆ ಇವತ್ತು ನಡೆದ ಕಾರ್ಯಕಾರಣಿ ಸಭೆಯಲ್ಲಿ ಸಮಾಜದ ಮುಖಂಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.
ಜಾತಿಯ ಮೇಲೆ ಪ್ರಾಧಿಕಾರಗಳನ್ನು ಸ್ಥಾಪನೆ ಮಾಡುತ್ತಾ ಜಾತಿಯ ಮೇಲೆ ಚುನಾವಣೆ ಮಾಡುವುದು ಎಷ್ಟರಮಟ್ಟಿಗೆ ಒಳ್ಳೆಯದು ಎಂದು ವಿಚಾರ ಮಾಡಬೇಕು, ಅಲ್ಲದೆ ಚುನಾವಣೆಗಳು ಜಾತಿ ಮೀರಿ ನಡೆಯಬೇಕು, ಜಾತಿ ಆಧಾರದ ಮೇಲೆ ನಡೆಯಬಾರದು,ಮರಾಠಾ ಸಮಾಜ ಅಭಿವೃದ್ಧಿ ಕಾಣಬೇಕಾದ್ರೆ ಅದೂ 2ಎ ಮೀಸಲಾತಿಯಿಂದಾನೇ ಮಾತ್ರ ಸಾಧ್ಯವಾಗುತ್ತದೆ. ಅಲ್ಲದೆ ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಇನ್ನೂ ಐವತ್ತು ಕೋಟಿ ಹಣ ನೀಡಿಲ್ಲಾ ಕೊಡುವುದಾಗಿ ಹೇಳಿದ್ದಾರೆ. ಹಾಗಾಗಿ ಇದು ಒಂದು ಚುನಾವಣೆ ಗಿಮಿಕ್ ಎಂದು ನಾವು ಹೇಳಿದ್ದೇವು. ಸಾಕಷ್ಟು ಭರವಸೆಗಳನ್ನು ನಾವು ನೋಡಿದ್ದೇವೆ.ಪ್ರವಾಹ ಬಂದು ಕಳೆದ ವರ್ಷ ಮನೆಗಳು ಬಿದ್ದು ಹೋಗಿವೆ ಖಾನಾಪುರ ಕ್ಷೇತ್ರದಲ್ಲಿ ಇದೂವರೆಗೂ ಒಂದು ನೈಯಾ ಪೈಸಾ ಹಣ ಬೀಡುಗಡೆ ಆಗಿಲ್ಲ,ಯಾರು ಕೂಡಾ ಬಂದಿಲ್ಲ ಬಂದು ನೋಡಲಿ ಎಂದು ಅವರು ಹೇಳಿದರು.
Kshetra Samachara
29/11/2020 05:52 pm