ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಪ್ರಧಾನ ಮುಖ್ಯ ಕಾರ್ಯದರ್ಶಿ ಹುದ್ದೆ ಇಲ್ಲ : ಟಿಪ್ಪಣಿ ಯಾರಿಗೆ ಹೋಯ್ತು?: ಶ್ರೀನಿವಾಸ ಮಾನೆ

ಧಾರವಾಡ : ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಿನ್ನೆಲೆ ಪ್ರಾಧಿಕಾರ ಮಾಡಿದ್ದು ಯಾವುದಾದರೂ ಆದೇಶ ಇದೆಯಾ? ಅದಕ್ಕೆ ನೇತೃತ್ವ ಯಾರದು ಅನ್ನೋ ಸ್ಪಷ್ಟತೆ ಇದೆಯಾ? ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಪ್ರಶ್ನಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮರಾಠ ಕ್ರಾಂತಿ ಮೋರ್ಚಾದಿಂದ ಹಮ್ಮಿಕೊಂಡಿರುವ ಕಾರ್ಯಕಾರಣಿ ಸಭೆಯಲ್ಲಿ ಪ್ರಾಧಿಕಾರ ಮಾಡಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು,ಅಭಿನಂದನೆ ಯಾಕೆ ಸಲ್ಲಿಸಿದೀರಿ ಪ್ರಾಧಿಕಾರದ ಘೋಷಣೆ ಇನ್ನೂ ಆಗಿಲ್ಲ,ಅದು ಕಾನೂನು ರೂಪದಲ್ಲಿ ಬರಬೇಕು,ರಾಜ್ಯಪಾಲರು ಸುಗ್ರೀವಾಜ್ಞೆಯಾದರೂ ಹೊರಡಿಸಬೇಕು ಎಂದ ಅವರು,

ಸಿಎಂ ಕಚೇರಿಯಿಂದ ಹೋಗುವ ಪ್ರತಿ ಟಿಪ್ಪಣಿಗೆ ಫೈಲ್ ನಂಬರ್ ಇರುತ್ತದೆ.ಆದರೆ ನಮ್ಮ ಪ್ರಾಧಿಕಾರದ ಟಿಪ್ಪಣಿಗೆ ಯಾವುದೇ ಸಂಖ್ಯೆ ಇಲ್ಲ, ಆದರೆ ಮತ್ತೊಂದು ನಿಗಮ ಮಾಡಿದ್ದಾರೆ ಅದಕ್ಕೆ ಎಲ್ಲ ಫೈಲ್ ನಂಬರ್ ಇದೆ.ನಮ್ಮ ಟಿಪ್ಪಣಿಗೆ ಮಾತ್ರ ಏನೂ ಇಲ್ಲ,ಆದರೆ ಯಾರಿಗೆ ಟಿಪ್ಪಣಿ ಹೋಯ್ತು? ಎಲ್ಲಿಗೆ ಹೋಯ್ತು? ಯಾರ ಬಳಿ ಈಗ ಟಿಪ್ಪಣಿ ಇದೆ? ಆದೇಶ ಯಾಕೆ ಆಗಿಲ್ಲ? ಯಾವುದೂ ಕೂಡ ಸ್ಪಷ್ಟವಾಗಿಲ್ಲ,ಯಾರು ಅವರನ್ನು ತಲೆ ಮೇಲೆ‌ ಹೊತ್ತು‌ ಕೊಂಡಿದ್ದೀರಲ್ಲ‌ ಅವರೆಲ್ಲ ಈಗ ಕೇಳಬೇಕು

ಆದರೆ ಇವರು ಏನೂ ಕೇಳೋದೆ ಇಲ್ಲ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

29/11/2020 04:09 pm

Cinque Terre

27.89 K

Cinque Terre

1

ಸಂಬಂಧಿತ ಸುದ್ದಿ