ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ನಿನ್ನೆ 58ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಹ್ಲಾದ ಜೋಶಿ ಅವರಿಗೆ ಕನ್ನಡದಲ್ಲೇ ಶುಭಾಶಯ ಕೋರಿ ಪತ್ರ ಕಳುಹಿಸಿದ್ದಾರೆ.
ಪತ್ರದಲ್ಲೇನಿದೆ ಗೊತ್ತಾ?
ತಮ್ಮ ಜನ್ಮದಿನೋತ್ಸವದ ಹೃತ್ಪೂರ್ವಕ ಶುಭಾಶಯಗಳು.
ಕೇಂದ್ರ ಮಂತ್ರಿಮಂಡಲದ ಪ್ರಮುಖ ಸದಸ್ಯರಾಗಿ ತಮ್ಮ ಕಠಿಣ ಪರಿಶ್ರಮ, ಅಸೀಮ ಶಕ್ತಿ ಹಾಗೂ ನಿರಂತರ ಕಾರ್ಯಪ್ರವೃತ್ತಿಯಿಂದ ತಾವು ನವಭಾರತದ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುತ್ತೀರಿ, ಪ್ರತಿಯೊಬ್ಬರ ಜೀವನದ ಮಹತ್ವವನ್ನು ತಿಳಿಯುವಂತಹ ಅಪೂರ್ವ ಸಂದರ್ಭವು ಅವರ ಜನ್ಮದಿನವಾಗಿರುತ್ತದೆ. ಅದೇ ಸಮಯದಲ್ಲಿ, ಈ ಜನ್ಮದಿನವು ನಮ್ಮ ಕುಟುಂಬ, ಸಮಾಜ ಮತ್ತು ದೇಶಕ್ಕೆ ನಮ್ಮ ಕರ್ತವ್ಯಗಳನ್ನು ಪೂರೈಸಲು ಇದು ನಮಗೆ ಪ್ರೇರಣೆ ನೀಡುವ ದಿನವೂ ಹೌದು. ಈ ಸಂದರ್ಭದಲ್ಲಿ ತಾವು ದೇಶದ ಪ್ರಗತಿಗಾಗಿ ದುಡಿಯುವಲ್ಲಿನ ಶ್ರದ್ಧೆ ಮತ್ತು ಕಾರ್ಯವೈಖರಿಗಳೇ ನಮ್ಮ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿವೆ ಎಂಬುದಾಗಿ ಹೇಳಲು ಹರ್ಷಿಸುತ್ತೇನೆ, ನಾನು ಈ ಸಂದರ್ಭದಲ್ಲಿ ನಿಮ್ಮ ಜೀವನವು ಆರೋಗ್ಯ ಮತ್ತು ಸಂತೋಷಗಳಿಂದ ಸಮೃದ್ಧವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಅಭಿನಂದನೆಗಳು. ಶುಭಾಶಾಂಕ್ಷೆಗಳೊಂದಿಗೆ,
ಹೀಗೆ ನರೇಂದ್ರ ಮೋದಿ ಅವರು ಪ್ರಹ್ಲಾದ ಜೋಶಿ ಅವರಿಗೆ ಶುಭಾಶಯ ಕೋರಿ ಪತ್ರ ಕಳುಹಿಸಿದ್ದಾರೆ.
Kshetra Samachara
28/11/2020 07:41 am