ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಂವಿಧಾನ ದಿನಾಚರಣೆ:ಮ್ಯಾರಥಾನ್ ಗೆ ಚಾಲನೆ ನೀಡಿದ ಎಸ್ ಪಿ‌ ಕೃಷ್ಣಕಾಂತ

ಕಲಘಟಗಿ:ಸ್ಥಳೀಯ ಪೊಲೀಸ್ ಇಲಾಖೆಯಿಂದ‌ ಪಟ್ಟಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಮ್ಯಾರಥಾನ್ ಓಟಕ್ಕೆ ಎಸ್ ಪಿ‌ ಕೃಷ್ಣಕಾಂತ ಚಾಲನೆ ನೀಡಿದರು.

ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ನಿಂದ ಯುವಶಕ್ತಿ ಕ್ರಾಸ್ ವರಗೆ ಜರುಗಿದ ಮ್ಯಾರಥಾನ್ ಓಟದಲ್ಲಿ ಪೊಲೀಸ್, ಸಾರ್ವಜನಿಕರು‌, ವಿದ್ಯಾರ್ಥಿಗಳು ಭಾಗವಹಿಸಿದರು.ನಂತರ ಪ‌ ಪಂ ಸಭಾಭವನದಲ್ಲಿ ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಎಸ್ ಪಿ ಕೃಷ್ಣಕಾಂತ‌ ಮಾತನಾಡಿ,ಪೊಲೀಸ್ ಹಾಗೂ ಜನರ ನಡುವೆ ಉತ್ತಮ ಸಂಪರ್ಕ ಸಾಧಿಸ ಬೇಕಾಗಿದ್ದು,ಇಂತಹ ಕಾರ್ಯಕ್ರಮಗಳಿಂದ ಜನಸ್ನೇಹಿ ಪೊಲೀಸ್ ಉಂಟಾಗಲು ಸಾಧ್ಯ ಎಂದರು.ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ‌ ಅಶೋಕ ಶಿಗ್ಗಾವಿ,ಕೃಷಿ ಅಧಿಕಾರಿ ಎನ್ ಎಫ್ ಕಟ್ಟೇಗೌಡರ,ಸಿಪಿಐ ವಿಜಯ ಬಿರಾದರ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

26/11/2020 09:48 pm

Cinque Terre

22.55 K

Cinque Terre

0

ಸಂಬಂಧಿತ ಸುದ್ದಿ