ಕಲಘಟಗಿ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ನೀಡಿದ್ದು,ನವೆಂಬರ್ 26 ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಾಲೂಕಾ ಭಾರತೀಯ ಜನತಾ ಪಕ್ಷದ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ನರೇಶ ಮಲೆನಾಡು ನುಡಿದರು.
ಮಿಶ್ರಿಕೋಟಿ ಗ್ರಾಮದಲ್ಲಿ ತಾಲೂಕಾ ಭಾರತೀಯ ಜನತಾ ಪಕ್ಷದ ಎಸ್ ಸಿ ಮೋರ್ಚಾದಿಂದ ಹಮ್ಮಿಕೊಂಡ ಸಂವಿಧಾನ ಸಮರ್ಪಣಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಪೂಜೆಯನ್ನು ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಕಾಶ ಅಣ್ಣಿಗೇರಿ,ಫಕ್ಕಿರೇಶ ಹಾವೇರಿ,ಮಹೇಶ ನರೇಂದ್ರ,ಮಂಜುನಾಥ ಹುಲ್ಲೂರ,ಸುಭಾಸ ನರೇಂದ್ರ,ಯಲ್ಲಪ್ಪ ನರೇಂದ್ರ,ಅನಿಲ ಕಮ್ಮಾರ, ಚನ್ನಪ್ಪ ಜೀವಕ್ಕನವರ,ಯಲ್ಲಪ್ಪ ಕುಂದಗೋಳ ಉಪಸ್ಥಿತರಿದ್ದರು.
Kshetra Samachara
26/11/2020 06:04 pm