ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗುಣಮಟ್ಟದ ಕಾಮಗಾರಿ‌ಗೆ ಶಾಸಕ ಸಿ ಎಂ ನಿಂಬಣ್ಣವರ ಸೂಚನೆ

ಕಲಘಟಗಿ: ತಾಲೂಕಿನ ಮಾಚಾಪೂರ, ಬೇಗೂರ,ಬಿಸ್ನಳ್ಳಿ, ಎಮ್ಮೆಟ್ಟಿ ಹಾಗೂ ಕುರುವಿನಕೊಪ್ಪ ಗ್ರಾಮಗಳಲ್ಲಿ ಅಂದಾಜು 2 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಎಂ ನಿಂಬಣ್ಣವರ ಚಾಲನೆ ನೀಡಿದರು.

ಮಾಚಾಪೂರದಲ್ಲಿ ಅಂಗನವಾಡಿ,ಶಾಲಾ ಕಟ್ಟಡ,ಬೇಗೂರ ಗ್ರಾಮದಲ್ಲಿ ಸಿ ಸಿ ರಸ್ತೆ ಹಾಗೂಬೇಗೂರ,ಬಿಸನಳ್ಳಿ,ಎಮ್ಮೆಟ್ಟಿ‌,ಕುರುವಿನಕೊಪ್ಪ ಗ್ರಾಮಗಳಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ,ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳು,ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ ಪಂ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ,ಸುನೀಲ ಗಬ್ಬೂರ,ಕೃಷ್ಣ ತಹಶೀಲ್ದಾರ,ಗಂಗಪ್ಪ ಗೌಳಿ,ಬಸವರಾಜ ಬಾಗೇವಾಡಿ, ಚಿಕ್ಕಮಠ,ಜಿ ಪಂ ಸದಸ್ಯೆ ಈರವ್ವ ದಾಸನಕೊಪ್ಪ,ಬಸವ್ವ ಮೂಗಣ್ಣವರ,ಪರಶುರಾಮ ರಜಪೂತ,ರಾಮಣ್ಣ ಬಂಡಿವಡ್ಡರ,ಎಲಿವಾಳ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

21/11/2020 05:25 pm

Cinque Terre

21.73 K

Cinque Terre

2

ಸಂಬಂಧಿತ ಸುದ್ದಿ