ಧಾರವಾಡ : ದೀಪಾವಳಿ ಹಬ್ಬದ ದಿನ ಧಾರವಾಡದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆದಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಹೇಳಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ ಪ್ರಕರಣದ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,ದೀಪಾವಳಿ ಹಿಂದೂಗಳ ದೊಡ್ಡ ಹಬ್ಬ,ಈ ಹಬ್ಬದಲ್ಲಿ ಎಲ್ಲಾ ಕಡೆ ಜೂಜು ಆಡುತ್ತಾರೆ.ಆದ್ರೆ ಧಾರವಾಡದಲ್ಲಿ ಬೇಕಂತಲೇ ದಾಳಿ ನಡೆಸಿ, ದೀಪಾವಳಿ ಹಬ್ಬಕ್ಕೆ ಅಡ್ಡಿಪಡಿಸಿದ್ದಾರೆ. ಅದೇ ದಿನ ಬೇರೆ ಕ್ಲಬ್ ಗಳಲ್ಲಿಯೂ ಜೂಜು ನಡೆದಿದ್ದವು. ನಗರದ ಜಿಮ್‌ಖಾನಾ ಕ್ಲಬ್ ನಲ್ಲಿ ಜೂಜಾಡಿದ್ದಾರೆ. ಬೇರೆ ಬೇರೆ ಕ್ಲಬ್ ಗಳಲ್ಲಿ ಜೂಜು ಆಡಲಾಗಿದೆ.ಅಲ್ಲಿಯೇ ಸಿಸಿ ಟಿವಿ ಪರಿಶೀಲನೆ ನಡೆಸಿದರೆ ಗೊತ್ತಾಗುತ್ತದೆ ಎಂದರು. ದೊಡ್ಡವರ ಕ್ಲಬ್ ಬಿಟ್ಟಿದ್ದಾರೆ. ಬೇಕಂತಲೇ ಕೆಲವು ಕ್ಲಬ್ ಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದರು.
ಐಜಿಪಿ ಅವರಿಗೆ ಬೆಳಗಾವಿ,ಗದಗ,ಬಿಜಾಪುರ, ಸೇರಿ ಬೇರೆ ಜಿಲ್ಲೆಗಳು ಕಾಣಲಿಲ್ಲವೇ, ಧಾರವಾಡ ಜಿಲ್ಲೆಯನ್ನು ಯಾಕೆ ಆಯ್ಕೆ ಮಾಡಿಕೊಂಡರು. ಕೆಲವರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗಿದೆ. ವೃದ್ಧರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ.ಕೆಲವರಿಗೆ ಜಾಮೀನು ನೀಡಿ,ಮತ್ತೆ ಠಾಣೆಗೆ ಬರಲು ವಾಹನ ಕೊಟ್ಟು ಕರೆಸಿಕೊಳ್ಳಲಾಗುತ್ತದೆ ಎಂದರು.
Kshetra Samachara
17/11/2020 01:54 pm