ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಹಿಂಡಸ ಗೇರಿ‌ ಬೇಡ್ತಿ ಸೇತುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ‌ ನೀಡಿದ ಶಾಸಕ ಸಿ ಎಂ ನಿಂಬಣ್ಣವರ

ಕಲಘಟಗಿ:ತಾಲೂಕಿನ ಹಿಂಡಸಗೇರಿ ಗ್ರಾಮದ‌ ಹತ್ತಿರವಿರುವ ರಾಜ್ಯ ಹೆದ್ದಾರಿಯ ಬೇಡ್ತಿ ಸೇತುವೆಯ ಐವತ್ತು ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ‌ ಶಾಸಕ ಸಿ.ಎಂ ನಿಂಬಣ್ಣವರ ಚಾಲನೆ ನೀಡಿದರು.

ಅತಿಯಾದ ಮಳೆಯಿಂದಾಗಿ ಬೇಡ್ತಿಹಳ್ಳದ ರಸ್ತೆ,ಸೇತುವೆ ತೀರಾ ಹದಗೆಟ್ಟಿದ್ದು,ಸುಧಾರಣೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದಿದ್ದು,ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಾ ಪಂ ಸದಸ್ಯೆ ವಿಜಯಲಕ್ಷ್ಮಿ ಆಡಿನವರ,ಬಿಜೆಪಿ ಅಧ್ಯಕ್ಷ ಬಸವರಾಜ ಶೆರೇವಾಡ,ಬಸವರಾಜ ಬಾಗೇವಾಡಿ,ಚಿಕ್ಕಮಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

15/11/2020 08:11 pm

Cinque Terre

33.42 K

Cinque Terre

0

ಸಂಬಂಧಿತ ಸುದ್ದಿ