ಹುಬ್ಬಳ್ಳಿ- ಪಶ್ಚಿಮ ಪದವೀಧರ ಕಾಂಗ್ರೆಸ್ ಅಭ್ಯರ್ಥಿ ಆರ್.ಎಮ್ ಕುಬೇರಪ್ಪ ಸೋಲು ಕಂಡಿದ್ದು, ಹಾಗೂ ಈ ಫಲಿತಾಂಶ ಬಹಳ ಬೇಸರ ತಂದಿದೆ ಎಂದು ಕಾಂಗ್ರೆಸ್ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ್ ಹೇಳಿದರು..
ನಗರದಲ್ಲಿಂದು ಮಾಧ್ಯಮದ ಮೂಲಕ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರ ನಮ್ಮ ಅಭ್ಯರ್ಥಿ ಸೋಲು ಕಂಡಿದ್ದು ನಾವೆಲ್ಲಾ ಆತ್ಮಲೋಕನ ಮಾಡಿಕೊಳ್ಳಬೇಕಿದೆ. ಕನಿಷ್ಠ ಈ ಚುನಾವಣೆಯಲ್ಲಿ ಸ್ಪರ್ಧಾತ್ಮಕವಾಗಿರುತ್ತೆ ಎಂದು ಕೊಂಡಿದ್ದೆವಿ. ಆದರೆ ಫಲಿತಾಂಶ ನೋಡಿದರೆ ಬಹಳ ಬೇಸರವಾಗಿದೆ. ನಮ್ಮ ಅಭ್ಯರ್ಥಿಗೆ ನಿರೀಕ್ಷಿತ ಮಟ್ಟದಲ್ಲಿ ಮತಗಳ ಬರಲಿಲ್ಲ ಆದ್ದರಿಂದ ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳುತ್ತೆವೆ ಎಂದರು.....
Kshetra Samachara
10/11/2020 09:16 pm