ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಹಾರ ಚುನಾವಣೆ ಎನ್ ಡಿಎ ಮೈತ್ರಿ ಕೂಟ ಮುನ್ನಡೆ ಹಿನ್ನೆಲೆ ಜನರ ತೀರ್ಪು ಅಂತಿಮ- ಗೋವಾ ಮಾಜಿ ಸಿಎಂ ದಿಗಂಬರ ಕಾಮತ್!

ಹುಬ್ಬಳ್ಳಿ- ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಜನರು ಕೊಟ್ಟಂತಹ ತೀರ್ಪು ನಾವು ಸ್ವೀಕಾರ ಮಾಡಲೇಬೇಕೆಂದು, ಕಾಂಗ್ರೆಸ್ ಮುಖಂಡ ಹಾಗೂ ಗೋವಾ ಮಾಜಿ ಸಿಎಂ ಕಾಮತ್ ಹೇಳಿದರು.

ನಗರದ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಎಮ್.ಜಿ.ಬಿ ಕಾಂಗ್ರೆಸ್ ಮೈತ್ರಿ ಕೂಟ ಬಹಳ ಅಂತರದಲ್ಲಿ ಸೋಲು ಕಾಣದು, ನಾವು ಸತತವಾಗಿ ಪ್ರಯತ್ನ ಮಾಡುತ್ತಿದ್ದೆವೆ. ಸ್ವಲ್ಪ ಪ್ರಮಾಣದಲ್ಲಿ ಪ್ರಯತ್ನ ವಿಫಲವಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಪಕ್ಷ‌ ಸಂಘಟನೆ ಮಾಡುತ್ತವೆ. ಕರ್ನಾಟಕದಲ್ಲಿ ನಡೆದ ವಿಧಾನ ಸಭಾ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿ, ಅಧಿಕಾರದಲ್ಲಿ ಯಾವ ಪಕ್ಷ ಇರುತ್ತೇ ಆ ಪಕ್ಷಕ್ಕೆ ಗೆಲುವು ಕಾಣುವುದು ಸಹಜ, ಇಲ್ಲಿ ಜನರ ತೀರ್ಪು ಅಂತಿಮವಾಗುತ್ತೆ ಎಂದರು. ಅದೇ ರೀತಿ ಬಿಹಾರದ ಚುನಾವಣೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡಬೇಕು ಜನರಿಗೆ ಯಾರ‌ ಅವಶ್ಯಕತೆ ಇದೇ ಅವರನ್ನೇ ಆಯ್ಕೆ ಮಾಡುತ್ತಾರೆ, ಆದ್ದರಿಂದ ನಾವೂ ಜನರು ನೀಡಿದ ತೀರ್ಪು ಸ್ವೀಕಾರ ಮಾಡಬೇಕಾಗುತ್ತದೇ ಎಂದರು...

Edited By : Nagesh Gaonkar
Kshetra Samachara

Kshetra Samachara

10/11/2020 09:13 pm

Cinque Terre

52.6 K

Cinque Terre

0

ಸಂಬಂಧಿತ ಸುದ್ದಿ