ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೃಷಿ ವಿವಿ ಖಾಲಿ.. ಖಾಲಿ

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಆಯಾ ಪಕ್ಷಗಳ ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ಜಮಾಯಿಸಬಹುದು ಎಂದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಆದರೆ, ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಯಾವ ಪಕ್ಷಗಳ ಬೆಂಬಲಿಗರೂ ಬರದೇ ಇರುವುದರಿಂದ ಕೃಷಿ ವಿವಿ ಖಾಲಿ ಖಾಲಿಯಾಗಿದೆ.

ಕೃಷಿ ವಿಶ್ವವಿದ್ಯಾಲಯದ ಒಂದು ಭಾಗದಲ್ಲಿ ಕಟ್ಟಿಗೆಯನ್ನು ಕಟ್ಟಿ ಬಂದೋಬಸ್ತ್ ಮಾಡಲಾಗಿದೆ.

ಇನ್ನೊಂದೆಡೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಅಲ್ಲಲ್ಲಿ ಬರೀ ಪೊಲೀಸರೇ ಕಾಣುತ್ತಿದ್ದಾರೆ ಹೊರತು ಯಾವ ಪಕ್ಷದ ಕಾರ್ಯ ಕರ್ತರು ಕಾಣುತ್ತಿಲ್ಲ.

Edited By : Manjunath H D
Kshetra Samachara

Kshetra Samachara

10/11/2020 02:54 pm

Cinque Terre

45.45 K

Cinque Terre

2

ಸಂಬಂಧಿತ ಸುದ್ದಿ